ಕಾಂಗ್ರೆಸ್ ನಾಯಕನ ಮನೆಯಲ್ಲಿ ಕೊನೆಗೂ ಮುಗಿದ ದುಡ್ಡಿನ ಲೆಕ್ಕ- ಪತ್ತೆಯಾಯಿತು ರೂ. 353.5 ಕೋಟಿ

ನವದೆಹಲಿ: ಐವತ್ತು ಬ್ಯಾಂಕ್ ಅಧಿಕಾರಿಗಳು, 40 ಎಣಿಕೆ ಯಂತ್ರಗಳು ಜೊತೆಗೆ ಅಧಿಕಾರಿಗಳಿಂದ ಐದು ದಿನಗಳ ದಣಿವರಿಯದ ಹಣ ಎಣಿಕೆ ಕಾರ್ಯಾಚರಣೆ ನಾವು ಹೇಳುತ್ತಿರುವುದು ಯಾವುದೇ ದೇವಸ್ಥಾನ ಹುಂಡಿ ಹಣದ ಲೆಕ್ಕಾಚಾರವಲ್ಲ ಬದಲಾಗಿ ಇದು ಝಾರ್ಖಂಡ್‌ನಿಂದ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಮತ್ತು ಉದ್ಯಮಿ ಧೀರಜ್‌ ಪ್ರಸಾದ್‌ ಸಾಹೂ ನಿವಾಸ ಮತ್ತು ಅವರಿಗೆ ಸೇರಿದ ಕಚೇರಿಗಳ ಮೇಲೆ ಆದಾಯ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪತ್ತೆಯಾದ ನೋಟಿನ ಕಂತೆಗಳ ಮೌಲ್ಯ.

ಒಡಿಶಾ ಮೂಲದ ಬೌಧ್​ ಮದ್ಯ ತಯಾರಿಕಾ ಕಂಪನಿ ಮತ್ತು ಅದರ ಸಹ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ನಡೆಸಿದ ವೇಳೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ ಇದನ್ನು ಲಕ್ಕ ಮಾಡಲು ಐವತ್ತು ಬ್ಯಾಂಕ್ ಅಧಿಕಾರಿಗಳನ್ನು ಕರೆಸಲಾಗಿದೆ, ಜೊತೆಗೆ ಹಣ ಲೆಕ್ಕ ಮಾಡಲು 40 ದುಡ್ಡು ಎಣಿಕೆ ಯಂತ್ರಗಳನ್ನು ವ್ಯವಸ್ಥೆ ಮಾಡಿ ಲೆಕ್ಕಾಚಾರ ಮಾಡಲಾಗುತ್ತಿದ್ದು ಐದು ದಿನದ ಬ್ಯಾಂಕ್ ಅಧಿಕಾರಿಗಳು ನಿರಂತರ ಲೆಕ್ಕಾಚಾರದಲ್ಲಿ ತೊಡಗಿದ್ದು ಭಾನುವಾರಕ್ಕೆ ಲೆಕ್ಕಾಚಾರ ಮುಕ್ತಾಯವಾಗಿದ್ದು ಬರೋಬ್ಬರಿ 353.5 ಕೋಟಿ ಲೆಕ್ಕಾಚಾರಕ್ಕೆ ಸಿಕ್ಕಿದೆ.

ಡಿಸೆಂಬರ್ 6 ರಂದು ಅಧಿಕಾರಿಗಳು ಕಚೇರಿ, ಮನೆ ಸೇರಿದಂತೆ ದಾಳಿ ನಡೆಸಿದ ವೇಳೆ ಒಟ್ಟು 176 ಬ್ಯಾಗ್‌ಗಳಲ್ಲಿ ದುಡ್ಡು ಪತ್ತೆಯಾಗಿದ್ದು ಇಷ್ಟು ದೊಡ್ಡ ಮೌಲ್ಯದ ಹಣವನ್ನು ಲೆಕ್ಕಾಚಾರ ಮಾಡಲು ಸ್ಟೇಟ್ ಬ್ಯಾಂಕ್ ಕಳೆದ ಐದು ದಿನಗಳಿಂದ ಬೇರೆಲ್ಲಾ ಕೆಲಸಗಳನ್ನು ಬಾಕಿ ಇಟ್ಟು ದುಡ್ಡು ಎಣಿಕೆ ಕಾರ್ಯ ಆರಂಭಿಸಿತ್ತು ಅದರಂತೆ ಭಾನುವಾರಕ್ಕೆ ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದು ಅದರಂತೆ ಸುಮಾರು ಐವತ್ತು ಅಧಿಕಾರಿಗಳು ಬಿಡುವಿಲ್ಲದೆ ನಲ್ವತ್ತು ಹಣ ಎಣಿಕೆ ಯಂತ್ರದ ಮೂಲಕ ಹಣ ಎಣಿಕೆ ಕಾರ್ಯಾಚರಣೆ ನಡೆಸಿ ಭಾನುವಾರ ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿ ಒಟ್ಟು 176 ಬ್ಯಾಗ್ ಗಳಲ್ಲಿ 353.5 ರೂಗಳು ಪತ್ತೆಯಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಮಾಹಿತಿ ಪ್ರಕಾರ 176 ಬ್ಯಾಗ್‌ಗಳನ್ನು ನಾವು ಸ್ವೀಕರಿಸಿದ್ದು ಅವುಗಳಲ್ಲಿ ಶನಿವಾರದ ವೇಳೆಗೆ 140 ಬ್ಯಾಗ್ ನಲ್ಲಿದ್ದ ದುಡ್ಡಿನ ಎಣಿಕೆ ಮಾಡಲಾಗಿದೆ ಇನ್ನುಳಿದ ಮೂವತ್ತಾರು ಬ್ಯಾಗ್ ನಲ್ಲಿದ್ದ ಹಣವನ್ನು ಭಾನುವಾರ ಪೂರ್ಣಗೊಳಿಸುವ ನಿರ್ಧಾರ ಮಾಡಿದ್ದೂ ಇದಕ್ಕಾಗಿ ಮೂರು ಬ್ಯಾಂಕ್ ಗಳ ಐವತ್ತು ಅಧಿಕಾರಿಗಳು ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದು, 40 ಯಂತ್ರಗಳನ್ನು ನಿಯೋಜಿಸಲಾಗಿದೆ ಅಷ್ಟುಮಾತ್ರವಲ್ಲದೆ ದುಡ್ಡಿನ ಯಂತ್ರ ಕೈಕೊಟ್ಟರೆ ಅದಕ್ಕೆ ಬೇಕಾದ ತಂತ್ರಜ್ಞರನ್ನೂ ವ್ಯವಸ್ಥೆ ಮಾಡಲಾಗಿತ್ತೂ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!