ಉಡುಪಿ ಧರ್ಮಪ್ರಾಂತ್ಯದ ಸೀನಿಯರ್ ಸಿಟಿಜನ್ ಕ್ಲಬ್ ಅಧ್ಯಕ್ಷರಾಗಿ ಅಲ್ಪೋನ್ಸ್ ಡಿಕೋಸ್ತಾ ಆಯ್ಕೆ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಸೀನಿಯರ್ ಸಿಟಿಜನ್ ಕ್ಲಬ್ ಇದರ ಅಧ್ಯಕ್ಷರಾಗಿ ಉಡುಪಿ ಶೋಕ ಮಾತಾ ದೇವಾಲಯದ ಅಲ್ಫೋನ್ಸ್ ಡಿಕೋಸ್ತಾ ಆಯ್ಕೆಯಾಗಿದ್ದು, ಅವರಿಗೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಸನ್ಮಾನಿಸಲಾಯಿತು.
ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಅವರು ಮಾತನಾಡಿ ಧರ್ಮಪ್ರಾಂತ್ಯ ಮಟ್ಟದಲ್ಲಿ ಹಿರಿಯರನ್ನು ಒಗ್ಗೂಡಿಸಿ ಸೌಹಾರ್ದ ಹಾಗೂ ಸಹಬಾಳ್ವೆಯ ಕುಟುಂಬಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಿಟಿಜನ್ ಕ್ಲಬ್ ಇದರ ಉಪಾಧ್ಯಕ್ಷರಾಗಿ ಅರ್ವಿನ್ ಡಿಸೋಜಾ ಶಿರ್ವ ಮತ್ತು ಕಾರ್ಯದರ್ಶಿಯಾಗಿ ಐರಿನ್ ಮಿನೇಜಸ್ ಕಲ್ಯಾಣಪುರ ಆಯ್ಕೆಯಾಗಿದ್ದಾರೆ.
ಸನ್ಮಾನ ಸಮಾರಂಭದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಪದಾಧಿಕಾರಿಗಳಾದ ಸೊಲೊಮನ್ ಕಾರ್ಕಳ, ನಿಯೋಜಿತ ಅಧ್ಯಕ್ಷರಾದ ರೋನಾಲ್ಡ್ ಆಲ್ಮೇಡಾ, ಮಾಜಿ ಅಧ್ಯಕ್ಷರಾದ ಮೇರಿ ಡಿಸೋಜಾ, ಆಲ್ವಿನ್ ಕ್ವಾಡ್ರಸ್, ಡಾ. ಜೆರಾಲ್ಡ್ ಪಿಂಟೊ, ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.