ಹಿರಿಯಡ್ಕ: 31 ಪ್ರಶಸ್ತಿಗಳನ್ನು ಬಾಚಿಕೊಂಡ ಕೆ.ಬಿ.ಕೆ ಕುರ್ಕಾಲು ತಂಡ
ಉಡುಪಿ: ಹಿರಿಯಡ್ಕದಲ್ಲಿ ಜರುಗಿದ 6ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಭಾಗವಹಿಸಿ 12 ಪ್ರಥಮ, 11 ದ್ವೀತೀಯ, 8 ತ್ರಿತೀಯ ಪ್ರಶಸ್ತಿಯನ್ನು ಕೆ.ಬಿ.ಕೆ ಕುರ್ಕಾಲು ತಂಡ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಎ ಪೂಜಾರಿರವರು, ಮಾಜಿ ಅಧ್ಯಕ್ಷರಾದ ಭುವನೇಶ್ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ವಿದ್ಯಾರ್ಥಿಗಳಾದ ಶರಣ್ಯ, ರೈನಾರ್, ಅಮಯ್, ಅವಿಷ್, ಆದಿತ್ಯ, ಪ್ರೀತಮ್, ನಿಹಾಲ್, ಮನೀಶ್, ಯತಿನ್, ಶ್ರೀವತ್ಸ, ಸೃಜನ್, ಮೋಕ್ಷ,ತನಿಶ್, ನಿಕೊಲ್, ಆತ್ಮೀಕ್, ಐಫಾಜ್, ತಾಹಿರ್, ಫಿಧಾ, ಫಾಹಿಜ್, ಮಣಿಕಂಠ ಹಾಗೂ ಹರ್ಷ ಮನೋಹರ ಇವರೊಂದಿಗೆ ಶಾಖೆಯ ಶಿಕ್ಷಕರಾದ ಶಿಹಾನ್ ಹರ್ಷ ಭಾಗವತ್ ಹಾಗೂ ಸೆನ್ಸಾಯ್ ಸೀತಾರಾಮ್ ಪೂಜಾರಿ ಅವರನ್ನು ಅಭಿನಂದಿಸಿದರು.