ಶಿರ್ವ: ಅಲೆಕ್ಸ್ ಟೆಕ್ಸ್‌ಟೈಲ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ವಿಶೇಷ ಆಫರ್

ಶಿರ್ವ, ಡಿ.9(ಉಡುಪಿ ಟೈಮ್ಸ್ ವರದಿ) ಶಿರ್ವ ಪೇಟೆಯಲ್ಲಿ 63 ವರ್ಷಗಳಿಂದ ಗ್ರಾಹಕರಿಗೆ ನಗುಮೋಗದ ಸೇವೆಯನ್ನು ನೀಡುತ್ತಾ ಬಂದಿರುವ ಪ್ರಸಿದ್ಧ ಜವಳಿ ಮಳಿಗೆ ಅಲೆಕ್ಸ್ ಟೆಕ್ಸ್‌ಟೈಲ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ಆಫರ್ ಪ್ರಕಟಿಸಿದೆ.

ಶಿರ್ವ ಬಸ್ ನಿಲ್ದಾಣದ ಬಳಿಯ ಸುಸಜ್ಜಿತ ಮತ್ತು ವಿಶಾಲವಾದ ಸ್ಥಳವಿರುವ ಈ ಮಳಿಗೆಯಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳಿಗೆ ಬೇಕಾದ ಉತ್ಕೃಷ್ಟ ಗುಣಮಟ್ಟದ ಬಟ್ಟೆಬರೆಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗಲಿದೆ.

ರೆಡಿಮೇಡ್ ಡ್ರೆಸ್, ಮದುವೆ ಸೀರೆಗಳು, ಉನ್ನತ ಶ್ರೇಣಿಯ ಕಾಟನ್, ಕಾಂಜೀವರಂ ಸಿಲ್ಕ್, ಡಿಸೈನರ್ ಸೀರೆಗಳು, ಸಲ್ವಾರ್, ಶರ್ವಾನಿ, ಟಿ ಶರ್ಟ್, ಬ್ರೈಡಲ್ ಗೌನ್, ಗಾಗ್ರಾ ಮೆಟಿರಿಯಲ್ಸ್, ಕಿಡ್ಸ್ ಕೇರ್, ಗೌನ್, ಜೀನ್ಸ್ ಟಾಪ್, ಕುರ್ತಾ ಸಹಿತ ಗ್ರಾಹಕರಿಗೆ ಬೇಕಾಗುವ ಎಲ್ಲಾ ವಿಧದ ಉನ್ನತ ಶ್ರೇಣಿಯ ಬಟ್ಟೆಬರೆಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಯುವಕ-ಯುವತಿಯರ ಹೊಸ ಹೊಸ ಫ್ಯಾಶನ್ ಉಡುಪುಗಳ ವಿಶೇಷ ವಿನ್ಯಾಸದ ಫ್ಯಾಮಿಲಿ ಶಾಪ್ ಇದಾಗಿದೆ.

ಮನೆಗೆ ಬೇಕಾಗುವಂತಹ ಬೆಡ್, ಬೆಡ್ ಶೀಟ್‌ಗಳು, ತಲೆದಿಂಬುಗಳು, ಕಾರ್ಟನ್ಸ್, ಸೂಟ್‌ಕೇಸ್, ಟ್ರಾವೆಲಿಂಗ್ ಬ್ಯಾಗ್, ಪರ್ಸ್, ವ್ಯಾನಿಟಿ ಬ್ಯಾಗ್, ಡೋರ್ ಮ್ಯಾಟ್ಸ್, ಟಾಯ್ಸ್, ಚಾಪೆಗಳ ವಿಫುಲ ಸಂಗ್ರಹವಿದೆ.

ಶಿರ್ವ ಆಸುಪಾಸಿ‌ನ ಜನತೆಯ ಮತ್ತು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಅಲೆಕ್ಸ್ ಟೆಕ್ಸ್ ಟೈಲ್, ಹಂತಹಂತಕ್ಕೆ ವಿವಿಧ ದೂರದ ಊರುಗಳ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಲವಾರು ವರ್ಷಗಳಿಂದ ವಸ್ತ್ರ ವೈವಿಧ್ಯಗಳ ವ್ಯವಹಾರದಲ್ಲಿ ಅನುಭವವುಳ್ಳ ಸಂಸ್ಥೆಯ ಏಕೈಕ ಮಳಿಗೆಯಾಗಿದೆ.

ಈ ಬಾರಿಯ ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಅಲೆಕ್ಸ್ ಟೆಕ್ಸ್‌ಟೈಲ್‌ನಲ್ಲಿ ವಿವಿಧ ಹೊಸ ಹೊಸ ಹಾಗೂ ಪ್ರಖ್ಯಾತ ಬ್ರ್ಯಾಂಡೆಡ್ ಕಂಪನಿಗಳ ಬಟ್ಟೆಗಳನ್ನು ಖರೀದಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು‌ ಹೆಚ್ಚಿಸೋಣ.

ನಮ್ಮ ಸಂಸ್ಥೆಗೆ 63 ವರ್ಷಗಳಿಂದ ಗ್ರಾಹಕರು ನೀಡಿದ ವಿಶ್ವಾಸ ಮತ್ತು ಸಹಕಾರಕ್ಕೆ ಅಲೆಕ್ಸ್ ಟೆಕ್ಸ್‌ಟೈಲ್‌ನ ಮಾಲೀಕರಾದ ಆಲ್ವಿನ್ ಡಿ ಸೋಜ ರವರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!