ಬಿರ್ತಿಯಲ್ಲಿ ಕನಕ ಗೀತಾ ಗಾಯನ
ಬ್ರಹ್ಮಾವರ: ಕನಕ ಜಯಂತಿ ಆಚರಣೆ ಪ್ರಯುಕ್ತ ಇತ್ತೀಚೆಗೆ ಅಂಕದಮನೆ ಜಾನಪದ ಕಲಾತಂಡ, ಅಂಬೇಡ್ಕರ್ ಯುವಕ ಮಂಡಳ, ಆದಿದ್ರಾವಿಡ ಸಹಕಾರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಆಶ್ರಯದಲ್ಲಿ ತೆಂಕು ಬಿರ್ತಿಯ ಬಬ್ಬುಸ್ವಾಮೀ ದೇವಸ್ಥಾನದ ವಠಾರದಲ್ಲಿ ಕನಕ ಜಯಂತಿ ಆಚರಣೆ ಪ್ರಯುಕ್ತ ಸ್ವರಾಜ್ ಬಿರ್ತಿ ಮತ್ತು ತಂಡದವರಿಂದ ಕನಕ ಗೀತೆಗಳ ವೈಚಾರಿಕಾ ಮತ್ತು ಸಾಮಾಜಿಕ ಗೀತಾ ಗಾಯನ ನಡೆಯಿತು.
ಕನಕ ಜಯಂತಿಯ ಮುಖ್ಯ ಭಾಷಣಗಾರರಾಗಿ ಮಾತನಾಡಿದ ನಿವ್ರತ್ತಾ ಪ್ರಾಂಶುಪಾಲರಾದ ಡಾ. ಗಣನಾಥ ಎಕ್ಕಾರು ಅವರು ಇಂಡಿಯಾದ ಸಂವಿಧಾನದ ಮೂಲ ಆಶಯವು ವಚನ ಸಾಹಿತ್ಯದ ಸಾರವೇ ಆಗಿದೆ, ಕನಕದಾಸರ ಕೀರ್ತನೆಗಳ ಮೇಲು ಕೀಳಿನ ಅಸ್ಪಶ್ಯತೆಯ ವಿರುಧ್ಧದ ಬಂಡಾಯದ ಗೀತೆಗಳ ಒಳನೋಟದ ಆಶಯವೇ ನಮ್ಮ ಸಂವಿಧಾನದಲ್ಲೂ ನಾವು ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಕೊರಗ ಸಮುದಾಯದಲ್ಲಿ ಹುಟ್ಟಿ ಪಿಹೆಚ್‌ಡಿ ಪಧವಿ ಪಡೆದ ಡಾ.ಕಲಾವತಿ ಅವರನ್ನು ಅಬಿನಂಧಿಲಾಯಿತು. ಸನ್ಮಾನ ಸ್ವೀಕರಿಸಿ ಮಾತಾನಾಡಿದ ಡಾ.ಕಲಾವತಿಯ ವರು ತಳಸಮೂದಾಯದವರು ಶಿಕ್ಷಣ ಪಡೆಯುವಾಗ ಪ್ರತೀಹಂತದಲ್ಲೂ ನಾವು ಕಷ್ಟ ಸಮಸ್ಯೆ ಮತ್ತು ಆತಂಕವನ್ನು ಎದುರಿಸಬೇಕಾಗುತ್ತದೆ. ಆ ಅಡೆತಡೆ ಗಳನ್ನು ಮೆಟ್ಟಿ ನಿಂತು ಶಿಕ್ಷಣ ಮುಂದುವರಿಸುವುದು ನಮ್ಮಂತ ಸಮಾಜದ ಕಟ್ಟಕಡೆಯ ಸಮೂದಾಯಕ್ಕೆ ಒಂದು ಸವಾಲೇ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆದಿಧ್ರಾವಿಡ ಸಹಕಾರ ಸಂಘದ ಅಧ್ಯಕ್ಷರಾದ ಸುಧಾಕರ ಗುಜ್ಜರಬೆಟ್ಟು, ಅಂಕದ ಮನೆ ಜಾನಪದ ಕಲಾತಂಡದ ಅಧ್ಯಕ್ಷ ಅನಿಲ ಬಿರ್ತಿ , ಅಂಬೇಡ್ಕರ್ ಯುವಕ ಮಂಡಳದ ಮಾಜಿ ಅಧ್ಯಕ್ಷರಾದ ಹರೀಶ್ಚಂದ್ರ ಕೆ.ಡಿ, ವಾರಂಬಳ್ಳಿ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ನಾಗವೇಣಿ, ಗೌರವ ಉಪಸ್ಥತಿಯಲ್ಲಿ ಅಂಕದಮನೆ ತಂಡದ ಸಂಸ್ಥಾಪಕರಾದ ವಿಠಲ ಬಿರ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸುಂದರ ಮಾಸ್ತರ್, ಮಂಜುನಾಥ್ ಗಿಳಿಯಾರು, ವಡ್ಡರ್ಸೆ ಶ್ರೀನಿವಾಸ್, ಬಿರ್ತಿ ಸುರೇಶ, ಪರಮೇಶ್ವರ ಉಪ್ಪೂರು ,ಶಿವಾನಂದ ಬಿರ್ತಿ, ಪ್ರಶಾಂತ್ ಬಿರ್ತಿ ಮತ್ತು ಗಣ್ಯರಾದ ರಾಜೇಶ್ ಶೆಟ್ಟಿ ಬಿರ್ತಿ, ನಿತ್ಯಾನಂದ ಬಿ ಆರ್, ದೇವಾನಂದ ನಾಯಕ್ ಎಸ್.ನಾರಾಯಣ, ವರ್ಣ ವಿಶ್ವನಾಥ್, ವರದರಾಜ್ ಬಿರ್ತಿ, ಲಿಂಗಪ್ಪ ಕುಟ್ಟಿ, ಸದಾನಂದ ಬಿರ್ತಿ ಉಪಸ್ಥಿತರಿದ್ದರು. ಆರಂಭದಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ ಗಣೇಶ ಬಿರ್ತಿ ಕಾರ್ಯಕ್ರಮ ನಿರೂಪಿಸಿದರು.