ಸಿಎಂ ಖಾತೆಯಿಂದ ಹಣ ದೋಚಲು ಯತ್ನ- ಮಂಗಳೂರಿನ ಸಿನಿಮಾ ನಿರ್ದೇಶಕ ಸೇರಿ 6 ಮಂದಿ ಬಂಧನ
ಮಂಗಳೂರು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಖಾತೆಗೆ ಕನ್ನ ಹಾಕಲು ಹೋದ ಕರಾವಳಿ ನಿರ್ದೇಶಕ ಉದಯ್ ಕುಮಾರ್ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ನಿರ್ದೇಶಕ ಉದಯ ಶೆಟ್ಟಿ ಕಾಂತಾವರ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಬಂಧಿತ ಆರೋಪಿಗಳು.
ಈ ಖದೀಮರ ತಂಡ ನಕಲಿ ಚೆಕ್ ಬಳಕೆ ಮಾಡಿಕೊಂಡು ಹಣ ವಿತ್ ಡ್ರಾ ಮಾಡಲು ಮುಂದಾಗಿತ್ತು. ಅದೂ ಸಾವಿರ, ಲಕ್ಷ ರೂಪಾಯಿ ಅಲ್ಲ. ಬರೋಬ್ಬರಿ 52 ಕೋಟಿ ರೂಪಾಯಿ! ಈ ತಂಡ ಫೇಕ್ ಚೆಕ್ ಸೃಷ್ಟಿ ಮಾಡಿತ್ತು. ಆಂಧ್ರ ಸಿಎಂ ರಿಲೀಫ್ ಫಂಡ್ ನೀಡಿದ ಚೆಕ್ ಇದು ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಬ್ಯಾಂಕ್ನಲ್ಲಿ ಡ್ರಾ ಮಾಡಲು ಮುಂದಾಗಿತ್ತು.
ಆಂಧ್ರ ಸಿಎಂ ರಿಲೀಫ್ ಫಂಡ್ನಿಂದ 58 ಕೋಟಿ ರೂಪಾಯಿ ವಿತ್ ಡ್ರಾ ಆಗುತ್ತಿದೆ ಎನ್ನುವ ವಿಚಾರ ಬ್ಯಾಂಕ್ನವರಿಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಆಂಧ್ರ ಸರ್ಕಾರದ ಜೊತೆ ಮಾತನಾಡಿದ್ದರು. ಈ ವೇಳೆ ಅಷ್ಟು ಮೊತ್ತದ ಚೆಕ್ ಕೊಟ್ಟಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿತ್ತು. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಇವರನ್ನು ಬಂಧಿಸಲಾಗಿದೆ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈ ಸಂಬಂಧ ತನಿಖೆಗೆ ಆಗ್ರಹಿಸಿದೆ. ಇದುವರೆಗೆ 117 ಕೋಟಿ ರು ವಂಚನೆಯಾಗಿರುವುದು ಪತ್ತೆಯಾಗಿದೆ..