ನ.26: ಉಡುಪಿ ಧರ್ಮಪ್ರಾಂತ್ಯದ ಪರಮ ಪ್ರಸಾದ ಮೆರವಣಿಗೆ

ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮಪ್ರಸಾದದ ಮೆರವಣಿಗೆ ನವೆಂಬರ್ 26 ರಂದು ಭಾನುವಾರ 3 ಗಂಟೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ರೋಶನ್ ಥೋಮಸ್ ಡಿ’ಸೋಜಾರ ನೇತೃತ್ವದಲ್ಲಿ ಜಪಸರ ಪ್ರಾರ್ಥನೆ, ಬಳಿಕ 3.30 ಕ್ಕೆ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಜರುಗಲಿದ್ದು ಬಳಿಕ ಮಿಲಾಗ್ರಿಸ್ ಚರ್ಚಿನಿಂದ ಆರಂಭಗೊಂಡು ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ತನಕ ತೆರೆದ ವಾಹನದಲ್ಲಿ ಪರಮ ಪ್ರಸಾದವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕ ಗೌರವ ಸಲ್ಲಿಸಲಾಗುವುದು. ಮೌಂಟ್ ರೋಸರಿ ಚರ್ಚ್ ವಠಾರದ್ಲಲಿ ಉದ್ಯಾವರದ ಸಹಾಯಕ ಧರ್ಮಗುರು ವಂ|ಲಿಯೊ ಪ್ರವೀಣ್ ಡಿ’ಸೋಜಾರ ನೇತೃತ್ವದಲ್ಲಿ ಪ್ರವಚನ ನಡೆಯಲ್ಲಿ ಧರ್ಮಾಧ್ಯಕ್ಷರು ಪರಮ ಪ್ರಸಾದ ಆಶೀರ್ವಚನ ನೆರವೇರಿಸಲಿದ್ದಾರೆ.

ಇದೇ ವೇಳೆ   2025 ವರ್ಷದ ಸಂಭ್ರಮಕ್ಕೆ ಧರ್ಮಪ್ರಾಂತ್ಯದ ಮಟ್ಟದ ಆಚರಣೆಗೆ ಧರ್ಮಾಧ್ಯಕ್ಷರು ಚಾಲನೆ ನೀಡಲಿದ್ದಾರೆ. ಧರ್ಮಪ್ರಾಂತ್ಯದ ಸುಮಾರು 50ಕ್ಕೂ ಅಧಿಕ ಧರ್ಮಗುರುಗಳು ಮತ್ತು 3000ಕ್ಕೂ ಅಧಿಕ ಕ್ರೈಸ್ತ ಭಾಂಧವರು ಭಾಗವಹಿಸಲಿದ್ದಾರೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!