ಮಂಗಳೂರು: ಡಿ.10 ಅಂತರ್ ಧರ್ಮೀಯ ಸೌಹಾರ್ದ ಕ್ರೀಡಾ ಕೂಟ

ಮಂಗಳೂರು: ಕಥೊಲಿಕ್ ಸಭಾ ಮಂಗಳೂರು ಪ್ರದೇಶ, ಆಂಜೆಲೊರ್ ಘಟಕ ಮತ್ತು ಅಂತರ್ ಧರ್ಮೀಯ ಸಂವಾದ ಆಯೋಗ, ಆಂಜೆಲೊರ್ ಚರ್ಚ್, ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ಭಾನುವಾರ, ಡಿಸೆಂಬರ್ 10 ರ ಬೆಳಿಗ್ಗೆ 8.45 ರಿಂದ ಕಪಿತಾನಿಯೊ ಶಾಲಾ ಮೈದಾನದಲ್ಲಿ ಆಯೋಜಿಸಿದೆ.

ಈ ಬಗ್ಗೆ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಂತರ್ ಧರ್ಮೀಯ ಆಯೋಗದ ಸಂಚಾಲಕರಾದ ಫೆಲಿಕ್ಸ್ ಮೊರಾಸ್, ಸರ್ವಧರ್ಮದವರು ಕಟ್ಟಿ ಬೆಳೆಸಿದ ಮಂಗಳೂರು ಸೌಹಾರ್ದತೆಯಿಂದ ಕೂಡಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಲಯವನ್ನು ಇನ್ನೂ ಉತ್ತಮ ರೀತಿಯಲ್ಲಿ ಬೆಳೆಸಲು ಈ ಕ್ರೀಡಾ ಪಂದ್ಯಾವಳಿಯನ್ನು ಕಥೊಲಿಕ್ ಸಭಾ(ರಿ) ಆಂಜೆಲೊರ್ ಘಟಕ ಆಯೋಜಿಸಿದೆ ಎಂದರು.

ಸ್ಪರ್ಧೆಯ ನಿಯಮಗಳು:
• ವಾಲಿಬಾಲ್ ತಂಡದಲ್ಲಿ 9 ಕ್ರೀಡಾಳುಗಳಿದ್ದು, 6 ಕ್ರೀಡಾಳುಗಳು ಆಡಬೇಕು. (ಮೂವರು ಬದಲಿಗಾಗಿ)
• ತ್ರೋಬಾಲ್ ತಂಡದಲ್ಲಿ 10 ಕ್ರೀಡಾಳುಗಳಿದ್ದು, 7 ಕ್ರೀಡಾಳುಗಳು ಆಡಬೇಕು. (ಮೂವರು ಬದಲಿಗಾಗಿ)
• ವಯಸ್ಸಿನ ಮಿತಿಯಿಲ್ಲ.
• ತಂಡದಲ್ಲಿ 4 ಕ್ರೀಡಾಳುಗಳು ಕ್ರೆöÊಸ್ತೇತರಿರಬೇಕು ಮತ್ತು ಆಟದಲ್ಲಿ ಕಡ್ಡಾಯವಾಗಿ ಕನಿಷ್ಠ 2 ಕ್ರೀಡಾಳುಗಳಿರಬೇಕು.
• ಈ ಪಂದ್ಯಾಟವು ಸಿಟಿ ಮತ್ತು ಎಪಿಸ್ಕೋಪಲ್ ಸಿಟಿ ಕ್ಷೇತ್ರಗಳ ಚರ್ಚುಗಳಿಗೆ ಸೀಮಿತವಾಗಿದ್ದು, ಒಂದು ಚರ್ಚಿನಿಂದ ಒಂದಕ್ಕಿ0ತ ಹೆಚ್ಚು ಪಂಗಡಗಳು ಭಾಗವಹಿಸಬಹುದು.
• ಪ್ರಥಮ ಮತ್ತು ದ್ವಿತೀಯ ಬಹುಮಾನದೊಂದಿಗೆ ಟ್ರೋಫಿಯನ್ನು ನೀಡಲಾಗುವುದು.
• ಭಾಗವಹಿಸುವ ಪ್ರತಿಯೊಂದು ಪಂಗಡಗಳಿಗೆ ಸಂಭಾವನೆ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಸ್ಪರ್ಧೆಯ ಸಂಚಾಲಕರಾದ ಫೆಲಿಕ್ಸ್ ಮೊರಾಸ್ : 9448476546 ಅಥವಾ
ಅಂತರ್ ಧರ್ಮೀಯ ಸಂವಾದ ಆಯೋಗದ ಕಾರ್ಯದರ್ಶಿ ರಾಜೇಶ್ ಮಿಸ್ಕಿತ್: 9448428113 ಇವರನ್ನು ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಆಂಜೆಲೊರ್ ಚರ್ಚ್ ರೋಶನ್ ಪತ್ರಾವೊ, ಕಥೊಲಿಕ್ ಸಭಾ ಅಧ್ಯಕ್ಷರು, ಆಂಜೆಲೊರ್ ಘಟಕ ವಂದನೀಯ ವಿಲ್ಯಮ್ ಮಿನೇಜಸ್, ಧರ್ಮಗುರುಗಳು, ಆಂಜೆಲೊರ್ ಚರ್ಚ್ ರೊಯ್ ಕ್ಯಾಸ್ಟಲಿನೊ, ಸಂಚಾಲಕರು, ಅಂತರ್ ಧರ್ಮೀಯ ಆಯೋಗ, ಮಂಗಳೂರು ಧರ್ಮಪ್ರಾಂತ್ಯ. ರಾಜೇಶ್ ಮಿಸ್ಕಿತ್, ಅಂತರ್ ಧರ್ಮೀಯ ಆಯೋಗ ಕಾರ್ಯದರ್ಶಿ ಲೊಲಿನಾ ಡಿಸೋಜಾ, ಪಾಲನಾ ಮಂಡಳಿ ಕಾರ್ಯದರ್ಶಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!