“ಗಬ್ಬರ್ ಸಿಂಗ್” ತುಳು ಸಿನಿಮಾ ಮಾಚ್೯ 22 ರಂದು  ತೆರೆಗೆ

ಮಂಗಳೂರು: ಟೈಟಲ್, ಪೋಸ್ಟರ್  ನಿಂದಲೇ ಕುತೂಹಲ ಕೆರಳಿಸಿರೋ “ಗಬ್ಬರ್ ಸಿಂಗ್” ತುಳು ಚಲನಚಿತ್ರ ಮಾಚ್೯ 22  ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು  ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು ತಿಳಿಸಿದ್ದಾರೆ. 

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಗಬ್ಬರ್ ಸಿಂಗ್ ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.  ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾ ದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. 

“ಗಬ್ಬರ್ ಸಿಂಗ್” ಆಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಸಿನಿಮಾ ಕತೆ ಚಿತ್ರಕತೆ ಸತೀಶ್ ಪೂಜಾರಿ ಬಾರ್ಕೂರ್, ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ಬೈಕಾಡಿ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ. 

ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು,  ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಸದಾಶಿವ ಬ್ರಹ್ಮಾವರ್, ಶಶಿ ಬೆಳ್ಳಾಯರು, ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ವೀಣಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಸಂತೋಷ್ ಮೊದಲಾದವರಿದ್ದಾರೆ. 

ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಕಲೆ: ವೆಂಕಟೇಶ್ ಬೆಂಗಳೂರು, ಸಂಗೀತ: ಡೊಲ್ವಿನ್  ಕೊಳಲಗಿರಿ. ಹಿನ್ನಲೆ ಸಂಗೀತ:ಕಾರ್ತಿಕ್ ಮುಲ್ಕಿ, ಸಾಹಸ:ಅಲ್ಟಿಮೆಟ್ ಶಿವ್, ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ:ಶರತ್ ಬರ್ಕೆ, ಸಹನಿರ್ದೇಶನ: =ಪುಷ್ಪರಾಜ ರೈ,ಜಯರಾಜ್, ಸಹಾಯ: ಭಾಗ್ಯರಾಜ್. ಸಿನಿಮಾಕ್ಕೆ ನರೇಶ್ ಕುಮಾರ್ ಸಸಿಹಿತ್ಲು, ಆರ್.ಎನ್. ಶೆಟ್ಟಿ ಕಳವಾರು ಗೀತಾ ಸಾಹಿತ್ಯ ಒದಗಿಸಿದ್ದಾರೆ. 

ಮಾಚ್೯ನಲ್ಲಿ ತೆರೆಗೆ

ಗಬ್ಬರ್ ಸಿಂಗ್ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾ ಮಾಚ್೯ 22 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಫೆಬ್ರವರಿಯಲ್ಲಿ ಮುಂಬೈ ಮತ್ತು ವಿದೇಶಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಚಿತ್ರದ  ನಿರ್ಮಾಪಕ  ಬಾರ್ಕೂರು ಸತೀಶ್ ಪೂಜಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!