ಉಡುಪಿ ಪ್ರಸಾದ್ ನೇತ್ರಾಲಯ: ವಿಶ್ವ ಮಧುಮೇಹ ದಿನಾಚರಣೆ- ನ.26 ಉಚಿತ ಮಧುಮೇಹ ಕಣ್ಣಿನ ತಪಾಸಣಾ ಶಿಬಿರ
ಉಡುಪಿ: ಇ0ದಿನ ದಿನಗಳಲ್ಲಿ ಮಧುಮೇಹ ಖಾಯಿಲೆಯು ಸಾಮಾನ್ಯವಾಗಿ ಕ0ಡು ಬರುತ್ತಿದ್ದು, ಖಾಯಿಲೆಗೆ ಒಳಗಾದವರು ಇದರ ನಿಯ0ತ್ರಣಕ್ಕಾಗಿ ನಿರ0ತರ ಆಹಾರ ಪಥ್ಯ, ವ್ಯಾಯಾಮ, ಔಷಧೋಪಚಾರಗಳನ್ನು ನಡೆಸಿಕೊ0ಡು ಬರಬೇಕಾಗುತ್ತದೆ. ಮಧುಮೇಹದಿ0ದ ದೇಹದ ಮೇಲಾಗುವ ದುಷ್ಪರಿಣಾಮಗಳಲ್ಲಿ ಪ್ರಮುಖವಾದ ದ್ದು ಕಣ್ಣಿನ ನರಗಳ ಮೇಲಾಗುವ ಪ್ರಭಾವ. ಸರಿಯಾದ ಸಮಯಕ್ಕೆ ಈ ತೊ0ದರೆಗಳ ಬಗ್ಗೆ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಕಣ್ಣಿನ ದೃಷ್ಟಿಯನ್ನು ಸ0ಪೂರ್ಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮಧುಮೇಹ ಖಾಯಿಲೆ ಇದ್ದವರು ಪ್ರತೀ 6 ತಿ0ಗಳಿಗೊಮ್ಮೆ ತಮ್ಮ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅವಶ್ಯಕವಾಗಿರುತ್ತದೆ.
ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ನ. 26 ಭಾನುವಾರದ0ದು ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಉಚಿತ ಮಧುಮೇಹ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅ0ದು ಬೆಳಿಗ್ಗೆ 9.00ಕ್ಕೆ ಪ್ರಾರ0ಭವಾಗುವ ಶಿಬಿರವು ಮಧ್ಯಾಹ್ನ 01.00 ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಉಚಿತ ತಪಾಸಣೆ ಇರುತ್ತದೆ. ಹೆಚ್ಚಿನ ತಪಾಸಣೆ ಅಗತ್ಯ ಕ0ಡುಬರುವ ಶಿಬಿರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ತಪಾಸಣೆ ನಡೆಸಲಾಗುವುದು ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು.
ಸಾರ್ವಜನಿಕರು ಅಪಾಯಿ0ಟ್ಮೆ0ಟ್ಗಾಗಿ 0820-2593323/24, 8792882134 ನ0ಬರನ್ನು ಸ0ಪರ್ಕಿಸಬೇಕು ಎ0ದು (ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಅಲ0ಕಾರ್ ಥಿಯೇಟರ್ ಹಿ0ಭಾಗ, ಎ.ಜೆ ಅಲ್ಸೆ ರಸ್ತೆ, ಉಡುಪಿ) ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.