ಉಡುಪಿ: ನ.25ಕ್ಕೆ ಕಟಪಾಡಿಯಲ್ಲಿ ದತ್ತಿನಿಧಿ ವಿದ್ಯಾರ್ಥಿವೇತನ ವಿತರಣೆ
ಉಡುಪಿ: ಶ್ರೀಕಾಶಿಮಠ ಸಂಸ್ಥಾನ ವೆಲ್ಫೇರ್ ಆಂಡ್ ಹಾಗೂ ಪೊಸಾರ್ ಹರಿಶೆಣೈ, ಸಕು ಬಾಯಿ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನ.25 ರಂದು ಬೆಳಗ್ಗೆ 9 ಗಂಟೆಗೆ ಕಟಪಾಡಿ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ದತ್ತಿನಿಧಿ ಪ್ರವರ್ತಕ ಡಾ.ಕೃಷ್ಣ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ನಂದಗೋಪಾಲ್ ಶೆಣೈ, ತೆಂಕಪೇಟೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ಎಂ.ದಿನೇಶ್ ಕಿಣಿ, ಉದ್ಯಮಿ ಕೆ.ಸತ್ಯೇಂದ್ರ ಪೈ,ಲಕ್ಷ್ಮೀ ಶೆಣೈ, ಕೊಚಿಕ್ಕಾರ್ ದಿವಾಕರ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಲೀಲಾ ಕೃಷ್ಣ ಶೆಣೈ, ತೆಂಕಪೇಟೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಪ್ರಮುಖರಾದ ಭಾಸ್ಕರ ಶೆಣೈ, ಕೋಟೇಶ್ವರ ಶ್ರೀನಿವಾಸ ಕಾಮತ್, ದಿನೇಶ್ ಶೆಣೈ, ದೀಪಕ್ ಶೆಣೈ ಉಪಸ್ಥಿತರಿದ್ದರು.