ಕೋಟ: ರೆಸಾರ್ಟ್ನ ಗೇಟ್ ಬಿದ್ದು ಮೂರು ವರ್ಷದ ಬಾಲಕ ಮೃತ್ಯು
ಕೋಟ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆ ಬೀಚ್ ಸಮೀಪದ ರೆಸಾರ್ಟ್ವೊಂದರ ಕಾಂಪೌಂಡಿನ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ನ. 21 ರಂದು ಮಂಗಳವಾರ ಸಂಜೆ ನಡೆದಿದೆ.
ಗೇಟ್ ಮೈಮೇಲೆ ಬಿದ್ದು ಮೃತಪಟ್ಟ ದುರ್ದೈವಿ ಕೋಟತಟ್ಟು ಪಡುಕರೆಯ ಸುಧೀರ್ ಕೋಟ್ಯಾನ್ ಹಾಗೂ ಶಾರದಾರವರ ಪುತ್ರ ಸುಶಾಂತ್ (3) ಎಂದು ತಿಳಿದು ಬಂದಿದೆ.
ಕೋಟತಟ್ಟು ಪಡುಕೆರೆಯ ಬೀಚ್ ಸಮೀಪ ಇರುವ ಪೃಥ್ವಿರಾಜ್ ರವರಿಗೆ ಸೇರಿದ ರೆಸಾರ್ಟ್ ಎದುರಿನ ಗೇಟ್ ಬಳಿ ಸಂಜೆ ಪಕ್ಕದ ಮನೆಯ ಹುಡುಗನ ಜೊತೆ ಆಟವಾಡುತ್ತಿದ್ದ ಮೂರು ವರ್ಷದ ಸುಶಾಂತ್ ಎನ್ನುವ ಬಾಲಕನ ಮೇಲೆ ಆಕಸ್ಮಿಕವಾಗಿ ಸ್ಲೈಡಿಂಗ್ ಗೇಟ್ ಜಾರಿ ಮೈಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿರುತ್ತದೆ. ತಕ್ಷಣ ಮಗುವಿನ ತಂದೆ ಕೋಟ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಷ್ಟರಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.
ರೆಸಾರ್ಟ್ ಮಾಲಿಕ ಕಬ್ಬಿಣದ ಗೇಟನ್ನು ಸರಿಯಾಗಿ ಜೋಡಣೆ ಮಾಡದ ಕಾರಣ ಅವರ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿಯಿಂದ ಈ ದುರ್ಘಟನೆ ನಡೆದಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಕೋಟ ಆರಕ್ಷಕ ಠಾಣೆ ಎಸ್ಐ ಸುಧಾ ಪ್ರಭು ಹಾಗೂ ಎಎಸ್ಐ ರವಿಕುಮಾರ್, ಮತ್ತು ಗೋಪಾಲ್ ಪೂಜಾರಿ ಸಿಬ್ಬಂದಿ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.