ಮಣಿಪಾಲ: ಬೈಕ್ ಮತ್ತು ಸ್ಕೂಟರ್ ಢಿಕ್ಕಿ- ಕಾಲೇಜ್ ವಿದ್ಯಾರ್ಥಿನಿ ಮೃತ್ಯು, ಮೂವರಿಗೆ ಗಾಯ

ಮಣಿಪಾಲ, ನ.21: ಬೈಕೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರೆ ಮೃತಪಟ್ಟು ಮೂವರು ಗಾಯಗೊಂಡ ಘಟನೆ ನ.20ರಂದು ಮಧ್ಯಾಹ್ನ ವೇಳೆ ವಿದ್ಯಾರತ್ನ ನಗರ ರೋಯಲ್ ಅಂಬೇಸಿ ಅಪಾರ್ಟ್‌ಮೆಂಟ್ ಸಮೀಪ ನಡೆದಿದೆ.

ಮೃತರನ್ನು ಬೈಕಿನ ಸಹಾಸವಾರೆ ಉಡುಪಿಯ ಪ್ಯಾರಮೆಡಿಕಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸುಶ್ಮಿತಾ(19) ಎಂದು ಗುರುತಿಸಲಾಗಿದೆ. ಬೈಕ್ ಸವಾರ ರಾಹುಲ್, ಸ್ಕೂಟರ್ ಸವಾರರಾದ ಅನೂಜ್ ಮತ್ತು ಆದರ್ಶ ಗಾಯಗೊಂಡವರು. ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಕಾಯಿನ್ ಸರ್ಕಲ್ ನಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಬೈಕಿಗೆ, ಅದೇ ದಿಕ್ಕಿನಲ್ಲಿ ಬಂದ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ರಸ್ತೆಗೆ ಬಿದ್ದು ನಾಲ್ವರು ಸವಾರರು ಗಾಯಗೊಂಡರು. ಇವರಲ್ಲಿ ಗಂಭೀರವಾಗಿ ಗಾಯಗೊಂಡ ಸುಶ್ಮಿತಾ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!