ಮಂಗಳೂರು: ಪ್ರಸಾದ್ ನೇತ್ರಾಲಯ- ನ.22 ಉಚಿತ ಮಧುಮೇಹ ಕಣ್ಣಿನ ತಪಾಸಣಾ ಶಿಬಿರ

ಮಂಗಳೂರು: ಇಂದಿನ ದಿನಗಳಲ್ಲಿ ಮಧುಮೇಹ ಖಾಯಿಲೆಯು ಸಾಮಾನ್ಯವಾಗಿ ಕಂಡು ಬರುತ್ತಿದ್ದು, ಖಾಯಿಲೆಗೆ ಒಳಗಾದವರು ಇದರ ನಿಯಂತ್ರಣಕ್ಕಾಗಿ ನಿರಂತರ ಆಹಾರ ಪಥ್ಯ, ವ್ಯಾಯಾಮ, ಔಷಧೋಪಚಾರಗಳನ್ನು ನಡೆಸಿಕೊಂಡು ಬರಬೇಕಾಗುತ್ತದೆ. ಮಧುಮೇಹದಿಂದ ದೇಹದ ಮೇಲಾಗುವ ದುಷ್ಪರಿಣಾಮಗಳಲ್ಲಿ ಪ್ರಮುಖವಾದದ್ದು ಕಣ್ಣಿನ ನರಗಳ ಮೇಲಾಗುವ ಪ್ರಭಾವ. ಸರಿಯಾದ ಸಮಯಕ್ಕೆ ಈ ತೊಂದರೆಗಳ ಬಗ್ಗೆ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಮಧುಮೇಹ ಖಾಯಿಲೆ ಇದ್ದವರು ಪ್ರತೀ 6 ತಿಂಗಳಿಗೊಮ್ಮೆ ತಮ್ಮ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅವಶ್ಯಕವಾಗಿರುತ್ತದೆ.

ಮಂಗಳೂರು ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ನ. 22 ರ ಬುಧವಾರದಂದು ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಉಚಿತ ಮಧುಮೇಹ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 9 ಕ್ಕೆ ಪ್ರಾರಂಭವಾಗುವ ಶಿಬಿರವು ಮಧ್ಯಾಹ್ನ 1ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಉಚಿತ ತಪಾಸಣೆ ಇರುತ್ತದೆ. ಹೆಚ್ಚಿನ ತಪಾಸಣೆ ಅಗತ್ಯ ಕಂಡುಬರುವ ಶಿಬಿರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ತಪಾಸಣೆ ನಡೆಸಲಾಗುವುದು ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು.

ಸಾರ್ವಜನಿಕರು ಅಪಾಯಿಂಟ್‌ಮೆಂಟ್‌ಗಾಗಿ 0824-4276565, 9513586565 ನಂಬರನ್ನು ಸಂಪರ್ಕಿಸ ಬಹುದು ಎಂದು (ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಾಹಾಕಾಳಿ ದೇವಸ್ಥಾನ ಹತ್ತಿರ, ಪಂಪೈಲ್, ಉಳ್ಳೂಡಿ, ಎನ್. ಹೆಚ್ -66, ಮಂಗಳೂರು) ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!