“ಭಾರತ್ ಕೋ ಜಾನೋ 2023” ರಾಜ್ಯ ಮಟ್ಟದ ರಸಪ್ರಶ್ನೆ- ಉಡುಪಿ ಪ್ರಥಮ

ಉಡುಪಿ: ಭಾರತ ವಿಕಾಸ ಪರಿಷದ್ ದಕ್ಷಿಣ ಪ್ರಾಂತ, ಬೆಂಗಳೂರು ಇವರು ರಾಮನಗರ ಜಿಲ್ಲೆಯ ಚೆನ್ನಪಟ್ಟಣ ನಗರದ ಶತಮಾನೋತ್ಸವ ಭವನದಲ್ಲಿ ಶನಿವಾರ ನಡೆದ ರಾಜ್ಯ (ಪ್ರಾಂತ) ಮಟ್ಟದ “ಭಾರತ್ ಕೋ ಜಾನೋ 2023” ಸ್ಪರ್ಧಾತ್ಮಕ ರಸಪ್ರಶ್ನೆಯ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಉಡುಪಿಯಲ್ಲಿನ ಟಿಎಪೈ ಪ್ರೌಢ ಶಾಲೆಯ ದೀಪೇಶ್ ದೀಪಕ್ ಶೆಣೈ ನೇತೃತ್ವದ ಶ್ರೀಪಾದ ಒಡಗೂಡಿದ ತಂಡವು ವಿಜೇತರಾಗಿ ರಾಜ್ಯ (ಪ್ರಾಂತ್ಯ) ಕ್ಕೆ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದೆ.

ಶಾಲೆಯ ಮುಖ್ಯೋಪಾಧ್ಯಾಯಿನಿ, ಆಡಳಿತ ಮಂಡಳಿ, ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ರಕ್ಷಕ-ಶಿಕ್ಷಕ ವೃಂದವು ವಿದ್ಯಾರ್ಥಿಗಳ ಈ ಮಹೋನ್ನತ ಸಾಧನೆಗೆ ಅತೀವ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!