ವಿಶ್ವಕಪ್ ಕ್ರಿಕೆಟ್: ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಮರಳು ಶಿಲ್ಪದ ಮೂಲಕ ಶುಭ ಹಾರೈಕೆ

ಕಾಪು: ವಿಶ್ವಕಪ್ ಕ್ರಿಕೆಟ್ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಕಾಪು ಕಡಲಕಿನಾರೆಯಲ್ಲಿ ಮರಳು ಶಿಲ್ಪವನ್ನು ರಚಿಸಲಾಗಿದೆ.

ಮಣಿಪಾಲ್ ಸ್ಯಾಂಡ್ ಆರ್ಟ್‌ನ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹೀರೆಬೆಟ್ಟು ಈ ಮರಳು ಶಿಲ್ಪವನ್ನು ರಚಿಸಿದ್ದಾರೆ.

ಕಡಲ ಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಈ ಕಲಾಕೃತಿಯು ಆಕರ್ಷಣೆಯ ಕೇಂದ್ರವಾಗಿದೆ.

Leave a Reply

Your email address will not be published. Required fields are marked *

error: Content is protected !!