ನೇಜಾರು ಕೊಲೆ ಪ್ರಕರಣ ಭೇದಿಸಿದ ಪೊಲೀಸರನ್ನು ಅಭಿನಂದಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ನಿಯೋಗ
ಉಡುಪಿ: ಜಿಲ್ಲೆಯ ನೇಜಾರುವಿನಲ್ಲಿ ನ. 12ರಂದು ಬೆಳ್ಳಂಬೆಳಗ್ಗೆ ತಾಯಿ ಹಸೀನಾ ಮತ್ತು ಮೂವರು ಮಕ್ಕಳಾದ ಅಫ್ನಾನ್, ಐನಾಝ್ ಹಾಗೂ ಆಸಿಮ್ ಇವರ ಅಮಾನುಷ ಕೊಲೆಯನ್ನು ನಡೆಸಿದ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅವರ ಸಮಸ್ತ ತಂಡಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಹೂಗುಚ್ಛ ನೀಡುವುದರ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಳೆದುಕೊಳ್ಳದಂತೆ ಪ್ರಕರಣವನ್ನು ಅತ್ಯಂತ ಶೀಘ್ರವಾಗಿ ಭೇದಿಸಿ ಆರೋಪಿಯನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದ ಇಡೀ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಉಡುಪಿ ವಿಧಾನಸಭಾ ಕ್ಷೇತ್ರದ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ನಾಯಕರಾದ ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ಗಣೇಶ್ ನೆರ್ಗಿ, ಚಂದ್ರಮೋಹನ್ ಚಿಟ್ಪಾಡಿ, ಶರತ್ ಶೆಟ್ಟಿ, ಮಮತಾ ಶೆಟ್ಟಿ, ಸೌರಭ್ ಬಲ್ಲಾಳ್, ಶ್ರೀನಿವಾಸ್ ಹೆಬ್ಬಾರ್, ಕೃಷ್ಣ ಹೆಬ್ಬಾರ್, ಯತೀಶ್ ಕರ್ಕೇರ, ನಾಸಿರ್ ಯಾಕೂಬ್, ಶೇಖ್ ವಾಹಿದ್, ಹಸನ್ ಸಾಹೇಬ್, ತುಳಸಿದಾಸ್, ನವೀನ್ ಶೆಟ್ಟಿ, ಸತೀಶ್ ಕೊಡವೂರು, ಆನಂದ್ ಪೂಜಾರಿ, ಧನಂಜಯ್ ಕುಂದರ್, ಸುರೇಂದ್ರ ಆಚಾರ್ಯ, ಸುಮನಾ ಆಚಾರ್ಯ, ಅರ್ಚನಾ ದೇವಾಡಿಗ, ಶಾಲಿನಿ ಸಾಲ್ಯಾನ್, ನಾಗರಾಜ್ ಭಟ್ ಹಾಗೂ ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು.