ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಹಂತಕನ ಏಕಮುಖ ಪ್ರೇಮವೇ ಹತ್ಯೆಗೆ ಕಾರಣ?

ಉಡುಪಿ: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಏಕಮುಖ ಪ್ರೇಮವೇ ಕಾರಣ ಎಂದು ಪೊಲೀಸ್ ‌ತನಿಖೆಯಲ್ಲಿ ಬಹಿರಂಗವಾಗಿದೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಕ್ಯಾಬಿನ್‌ ಸಿಬ್ಬಂದಿಯಾಗಿದ್ದ  ಪ್ರವೀಣ್ ಅರುಣ್ ಚೌಗಲೆ(35)  ಅದೇ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಕೊಲೆಯಾದ ಐನಾಝ್‌‌ಳೊಂದಿಗೆ ಪ್ರೇಮವಾಗಿತ್ತು. ಆದರೆ ಐನಾಝ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.

ನ.12ರಂದು 36 ಬಾರಿ ಫೋನ್ ಮಾಡಿದ್ದ ಹಂತಕ ಕಳೆದ ಕೆಲವು ದಿನಗಳ ಹಿಂದೆ ಐನಾಝ್ ಹುಟ್ಟುಹಬ್ಬಕ್ಕೆ ನೇಜಾರು ಮನೆಗೆ ಬಂದಿದ್ದ ಹಂತಕ ಆಕೆಗೆ ಉಂಗುರವನ್ನು ಎಲ್ಲರ ಮುಂದೆ ಹಾಕಿದ್ದ.

ಇದರಿಂದ ಐನಾಝ್‌ ಮನೆಯವರ ಮುಂದೆ ಗಲಿಬಿಲಿಗೊಂಡಿದ್ದಳು. ಆ ಬಳಿಕ ಪ್ರವೀಣ್‌ನನ್ನು ದೂರ ಮಾಡಲು ಯತ್ನಿಸಿದ್ದಳು. ಇದರಿಂದ ಖಿನ್ನತೆಗೆ ಒಳಗಾದ ಪ್ರವೀಣ್ ಐನಾಝ್‌ಗೆ ನಿರಂತರ ಫೋನ್ ಮಾಡುತ್ತಿದ್ದ. ಐನಾಝ್ ಕೊಲೆಯಾದ ದಿನವೇ ಬೆಳಿಗ್ಗೆ 11 ಗಂಟೆಗೆ ದುಬೈಗೆ ಏರ್‌ಇಂಡಿಯಾ ವಿಮಾನದಲ್ಲಿ ಗಗನ ಸಖಿಯಾಗಿ ಕಾರ್ಯನಿರ್ವಹಿಸಲು ಹೋಗಬೇಕಿತ್ತು. ಆದರೆ ಅಂದೇ ಬೆಳಿಗ್ಗೆ ಯಮರೂಪಿಯಾಗಿ ಬಂದ ಪ್ರವೀಣ್ ಮನೆಯಲ್ಲಿದ್ದ ನಾಲ್ವರನ್ನು ಹತ್ಯೆಗೈದು ಪರಾರಿಯಾಗಿದ್ದ.

ನಾಲ್ವರನ್ನು ಹತ್ಯೆಗೈದು ಬಸ್ ಮೂಲಕ‌ ಮಂಗಳೂರಿಗೆ ಹೋಗಿ ಅಲ್ಲಿಂದ ತನ್ನ ಹೆಕ್ಟರ್ ಕಾರಿನಲ್ಲಿ ಬೆಳಗಾವಿಗೆ ಹೋಗಿ ಪರಿಚಯದ ನೀರಾವರಿ ಇಲಾಖೆಯ ಅಧಿಕಾರಿ ಮನೆಯಲ್ಲಿ ಒಂದು ದಿನ ಅಡಗಿದ್ದ. ಅಲ್ಲಿಂದ ನೇರ ತನ್ನೂರು ಸಾಂಗ್ಲಿಗೆ ಹೋಗಿ ಅವಿತುಕೊಳ್ಳುವ ಪ್ಲಾನ್ ರೂಪಿಸಿದ್ದ ಹಂತಕ.

ಕೊಲೆಯಾದ ತಕ್ಷಣ ಎಲರ್ಟ್ ಆದ ಪೊಲೀಸರು ಐನಾಝ್ ದುಡಿಯುತ್ತಿದ್ದ ಏರ್‌ಪೋರ್ಟ್‌ಗೆ ಭೇಟಿ ನೀಡಿ ಉದ್ಯೋಗಿಗಳ ಮಾಹಿತಿ ಕಲೆ ಹಾಕಿದ್ದಾರೆ ಅಲ್ಲಿ ರಜೆ ಹಾಕಿದ್ದ ಪ್ರವೀಣ್ ಮಾಹಿತಿ ಕಲೆ ಹಾಕಿ ಫೋನ್ ಟ್ರಾಕ್‌ ಮಾಡಿದ್ದರು.

ಅದರಂತೆ ಬ್ರಹ್ಮಾವರ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ನೇತೃತ್ವದ ತಂಡ ಕುಡುಚಿ ಪೊಲೀಸರ ಸಹಾಯದಿಂದ ಹಂತಕನನ್ನು ವಶಕ್ಕೆ ಪಡೆದು ಉಡುಪಿಗೆ ಕರೆತಂದಿದ್ದಾರೆ.

ಆಂಧ್ರಪ್ರದೇಶಕ್ಕೆ ಹಾರಲು ಸಂಚು ರೂಪಿಸಿದ್ದ ಹಂತಕ

ಆರೋಪಿ ಪ್ರವೀಣ್ ಅರುಣ್ ಚೌಗಲೆ ಕುಡಚಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದ ಎನ್ನುವುದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಈ ಹಿಂದೆ CISF ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದ ಎಂದು ಹೇಳಲಾಗಿದೆ. ಬಳಿಕ ಏರ್‌ಪೋರ್ಟ್‌ನ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ತನಿಖೆಗೆ ನೆರವಾದ ಆರೋಪಿಯ ನಡಿಗೆಯ ಶೈಲಿ : ಮಾಹಿತಿಗಳ ಪ್ರಕಾರ, ಘಟನೆಯ ಬಳಿಕ ಲಭ್ಯವಿದ್ದ ಸಿಸಿಟಿವಿ ಸಾಕ್ಷ್ಯಗಳನ್ನು ಪರಿಶೀಲಿಸಿದ್ದ ಪೊಲೀಸರು ಆರೋಪಿಯ ನಡಿಗೆ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು ಎನ್ನಲಾಗಿದೆ. ಇದು ಆರೋಪಿಯು ರಕ್ಷಣಾ ಇಲಾಖೆಗಳಿಗೆ ಸಂಬಂಧಿಸಿದ ವ್ಯಕ್ತಿ ಎಂಬ ಸುಳಿವು ನೀಡಿತ್ತು. ಬಳಿಕ ಆರೋಪಿ, ಅರುಣ್ ಚೌಗಲೆ ಬೆನ್ನುಬಿದ್ದ ಪೊಲೀಸರು, ಆತನನ್ನು ಬೆಳಗಾವಿಯ ಕುಡಚಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.

1 thought on “ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಹಂತಕನ ಏಕಮುಖ ಪ್ರೇಮವೇ ಹತ್ಯೆಗೆ ಕಾರಣ?

  1. 1. Phone Call Records of both sides..
    2. About Praveen from his family members.
    3. Records of Praveen visiting the family in Nejaar long before the event.
    4. Why Praveen in Unmarried though he is 35 years old..
    5. Feedbacks on both from colleagues.

Leave a Reply

Your email address will not be published. Required fields are marked *

error: Content is protected !!