ನೇಜಾರು ಕೊಲೆ ಪ್ರಕರಣ: ಜನರ ಆತಂಕವನ್ನು ದೂರ ಮಾಡಿ- ವಿಮೆನ್ ಇಂಡಿಯಾ ಮೂಮೆಂಟ್ ಆಗ್ರಹ
ಉಡುಪಿ ಜಿಲ್ಲೆಯ ನೇಜಾರು ಎಂಬಲ್ಲಿ ಮೊನ್ನೆ ನಡೆದ ಒಂದೇ ಕುಟುಂಬದ ನಾಲ್ಕು ಜನರ ಭಯಾನಕ ಹತ್ಯೆ ಘಟನೆಯಿಂದ ಜಿಲ್ಲೆಯ ಜನ ಆಘಾತಕ್ಕೊಳಗಾಗಿ ದ್ದಾರೆ, ಕೊಲೆ ನಡೆದು ಎರಡು ದಿನ ಕಳೆದರೂ ಜಿಲ್ಲೆಯ ಜನರ ಆತಂಕ ದೂರವಾಗಿಲ್ಲ, ವಿಶೇಷವಾಗಿ ಮಹಿಳೆಯರಲ್ಲಿ ಭಯದ ವಾತಾವರಣವಿದೆ. ಘಟನೆ ನಡೆದು 48 ಗಂಟೆಗಳು ಕಳೆದರೂ ಕೊಲೆಗಾರನ ಬಂಧನವಾಗಲಿಲ್ಲ ಮತ್ತು ಯಾವುದೇ ಸುಳಿವು ಸಹ ಸಿಕ್ಕಿಲ್ಲ, ಮಾನ್ಯ ಉಸ್ತುವಾರಿ ಸಚಿವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಪೋಲಿಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಕೊಲೆಗಾರ ನನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೊಳಪಡಿ ಸುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸ ಬೇಕು ಮತ್ತು ಜಿಲ್ಲೆಯ ಜನರ ಆತಂಕವನ್ನು ದೂರ ಮಾಡಬೇಕು. ಹಾಗೂ ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ವಿಮೆನ್ ಇಂಡಿಯಾ ಮೂಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾಗಿ ರುವ ನಾಝಿಯಾ ನಸ್ರುಲ್ಲ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.