ಅನಿತಾ ಸಿಕ್ವೇರಾರಿಗೆ ರಾಜ್ಯಮಟ್ಟದ ಅವಳಿ ಪ್ರಶಸ್ತಿಯ ಗರಿ
ಮಂಡ್ಯ: ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹಾಗೂ ಜಿಲ್ಲಾ ಬರಹಗಾರರ ಸಂಘ ಮಂಡ್ಯ ಜಿಲ್ಲಾ ಘಟಕ ಇವರ ವತಿಯಿಂದ ಸುಮಾರು 25 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅನಿತಾ ಸಿಕ್ವೇರಾ ಉಡುಪಿ ಇವರಿಗೆ ರಾಜ್ಯ ಮಟ್ಟದ “ಸಾಹಿತ್ಯ ಸಿರಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸನ್ಮಾನ ಸಮಾರಂಭವು ಇತ್ತೀಚೆಗೆ ಮಂಡ್ಯದ ಗಾಂಧಿ ಭವನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಮಂಡ್ಯ ಬರಹಗಾರರ ಸಂಘದ ಅಧ್ಯಕ್ಷರಾದ ಉಮೇಶ್, ಕಾರ್ಯದರ್ಶಿ ರೂಪ, ಮಂಡ್ಯ ಬರಹಗಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ-ಬೆಳಗಾವಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರುಗಳ ಸಹಯೋಗದಲ್ಲಿ ನ.5 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಕಥಾ ಉತ್ಸವದಲ್ಲಿ ಭಾಗವಹಿಸಿ “ಕಾಗೆ ಮತ್ತು ಪಾರಿವಾಳ” ಎಂಬ ಸ್ವರಚಿತ ಮಕ್ಕಳನೀತಿ ಕಥೆಯ ವಾಚನ ಮಾಡಿದ ಸವಿನೆನಪಿಗಾಗಿ ಅನಿತಾ ಸಿಕ್ವೇರಾ ಇವರಿಗೆ ರಾಜ್ಯ ಮಟ್ಟದ ಕಥಾ ಚೇತನ ಪ್ರಶಸ್ತಿ-2023 ನೀಡಿ ಗೌರವಿಸಲಾಯಿತು.