ಮಲ್ಪೆ: ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ
ಮಲ್ಪೆ, ನ.12 (ಉಡುಪಿ ಟೈಮ್ಸ್ ವರದಿ) ನೇಜಾರಿನ ತೃಪ್ತಿ ಲೇಔಟ್‌ನ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಅಪರಿಚಿತ ಬೋಳು ತಲೆಯ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿ ಆಟೋ ರಿಕ್ಷಾದಲ್ಲಿ ಬಂದು ಕೃತ್ಯ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಹತ್ಯೆಯಾದವರನ್ನು ತಾಯಿ ಹಸೀನಾ(48), ಅಫ್ನಾನ್ (23), ಅಯ್ನಾಝ್ (21), ಅಸೀಮ್ (14) ಎಂದು ಗುರುತಿಸಲಾಗಿದೆ. ತಡೆಯಲು ಬಂದ ಹಸೀನಾ ಅತ್ತೆಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೂ ಸೊಂಟಕ್ಕೆ ಇರಿದಿದ್ದು, ದುಷ್ಕರ್ಮಿಯಿಂದ ತಪ್ಪಿಸಿಕೊಳ್ಳಲು ಆಕೆ ಶೌಚಾಲಯದಲ್ಲಿ ಅವಿತು ಕೊಂಡು ಜೀವ ರಕ್ಷಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಪೊಲೀಸರು ಸ್ಥಳಕ್ಕಾಗಮಿಸಿದ ಎಸ್ಪಿ ಡಾ. ಅರುಣ್ ಕುಮಾರ್, ಡಿವೈಎಸ್ಪಿ ದಿನಕರ, ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಸ್ಥಳಕ್ಕಾಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಎಂ.ಎ. ಗಫೂರ್ ಭೇಟಿ ನೀಡಿದ್ದಾರೆ.
ಸಿಸಿಟಿಯಲ್ಲಿ ಆರೋಪಿಯ ಚಹರೆ ಪತ್ತೆ…?
ಸಂತೆಕಟ್ಟೆಯಿಂದ ಆಟೋ ರಿಕ್ಷಾದಲ್ಲಿ ಬಂದ ದುಷ್ಕರ್ಮಿ ತೃಪ್ತಿ ಲೇಔಟ್ ಬಳಿ ತಿರುಗಿರುವುದು ಸಿಸಿಟಿಯಲ್ಲಿ ದಾಖಲಾಗಿದೆ.
ಮನೆಯ ಹೊರಗೆ ಆಟ ಆಡುತ್ತಿದ್ದ ಹದಿನಾಲ್ಕು ವರ್ಷದ ಬಾಲಕ ಮೇಲೂ ಕರುಣೆ ತೋರದ ದುಷ್ಕರ್ಮಿ…!
ಇಂದು ಬೆಳಿಗ್ಗೆ 8.45 ಸುಮಾರಿಗೆ ಮುಖಕ್ಕೆ ಮಾಸ್ಕ್ ಧರಿಸಿ ಮನೆಯೊಳಗೆ ಬಂದಿದ್ದ ಆರೋಪಿ ಮನೆಯವರ ಜೊತೆ ಯಾವುದೋ ವಿಷಕ್ಕೆ ವಾಗ್ವಾದ ನಡೆಸಿದ್ದ, ಬಳಿಕ ಹಸೀನಾ ಅವರಿಗೆ ಅಡುಗೆಕೋಣೆಯಲ್ಲಿ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆಕೆಯ ಮಗಳು ಮಂಗಳೂರಿನಲ್ಲಿ ಏರ್‌ಹೋಸ್ಟ್ಸ್ ಆಗಿರುವ ಶನಿವಾರವಷ್ಟೇ ಮನೆಗೆ ಬಂದಿದ್ದ ಅವಳನ್ನು ಅಡುಗೆ ಕೋಣೆಯ ಪಕ್ಕ ಇರುವ ಶೌಚಾಲಯದ ಬಳಿ ಇರಿಯಾಲಾಗಿದೆ. ಇನ್ನೋರ್ವ ಮಗಳನ್ನು ಬೆಡ್ ರೂಮ್ ಬಳಿ ಅನೇಕ ಬಾರಿ ಇರಿದು ಹತ್ಯೆಗೈಲಾಗಿದೆ.
ಮನೆಯೊಳಗೆ ಬೊಬ್ಬೆ ಕೇಳಿ ಓಡಿಬಂದ ಹನ್ನೆರಡು ವರ್ಷದ ಬಾಲಕ ಮನೆಯ ಒಳಗೆ ಬರುತ್ತಿದ್ದಂತೆ ದುಷ್ಕರ್ಮಿ ಕುತ್ತಿಗೆಗೆ ಇರಿದಿದ್ದಾನೆ. ಬಳಿಕ ಅಲ್ಲಿಂದ ಆಟೋ ರಿಕ್ಷಾದಲ್ಲೇ ಕರಾವಳಿ ಬೈಪಾಸ್ ತನಕ ಹೋಗಿದ್ದಾನೆ ಎಂದು ತಿಳಿದುಬಂದಿದೆ.