ಮುಂಬೈಯಲ್ಲಿ 2 ಕೆಜಿ ಕೊಕೇನ್ ವಶ- ಮಣಿಪಾಲದ ಬಾರ್ ಮಾಲೀಕ ಎನ್‌ಸಿಬಿ ಬಲೆಗೆ

ಉಡುಪಿ: ನೈಜೀರಿಯಾದಿಂದ ಅಕ್ರಮ ನುಸುಳು ಕೋರರಿಂದ 2 ಕೆಜಿ ಕೊಕೇನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಅನಧಿಕೃತವಾಗಿ ಪ್ಲಾಟ್ ಬಾಡಿಗೆ ನೀಡಿದ ಆರೋಪದಲ್ಲಿ ಮಣಿಪಾಲದ ಬಾರ್ ಮಾಲೀಕ, ಹೆರ್ಗ ನಿವಾಸಿಯನ್ನು ಎನ್.ಸಿ.ಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ವ್ಯಕ್ತಿ ಶೀಲ್ ಮೀರಾ ರೋಡ್ ಶಾಹಿ ಹೋಟೆಲ್ ಬಳಿಯ ಶೀತಲ್ ಸಾಯಿ ಸೊಸೈಟಿಯಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದ ಆರೋಪಿಗಳಿಗೆ ವಾಸ್ತವ್ಯಕ್ಕೆ ಅಕ್ರಮವಾಗಿ ಮನೆ ನೀಡಿದ್ದ ಆರೋಪದಲ್ಲಿ ಮಣಿಪಾಲದ ಹೋಟೆಲ್ ಉದ್ಯಮಿ ದಿನೇಶ್ ಭಾಸ್ಕರ್ ಶೆಟ್ಟಿಯನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಾರ್ ಮಾಲೀಕ ತನ್ನ ಬಾರ್‌ಗಳಿಗೆ ಡ್ರಗ್ಸ್ ಗಳನ್ನು ಕೂಡ ಇದೇ ಬಂಧಿತ ನೈಜೀರಿಯಾ ವ್ಯಕ್ತಿಗಳಿಂದ ಮಣಿಪಾಲಕ್ಕೆ ತರಿಸಿಕೊಂಡು ಅವ್ಯಾಹತವಾಗಿ ಮಾರಾಟ ಮಾಡಿದ್ದಾಗಿ ಎನ್‌ಸಿಬಿ ತನಿಖೆಯಿಂದ ಹೊರಬಂದಿದೆ.

ಸದ್ಯ ಬಾರ್ ಮಾಲೀಕ ಮುಂಬಯಿಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಡ್ರಗ್ಸ್ ಪೆಡ್ಲರ್ ಅವರ ಬ್ಯಾಂಕ್ ಖಾತೆಯಲ್ಲಿ ಬಾರ್ ಮಾಲೀಕ ಲಕ್ಷಾಂತರ ರೂ ವಹಿವಾಟು ನಡೆಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಹಲವು ವರ್ಷಗಳಿಂದ ಒಪ್ಪಂದವಿಲ್ಲದೆ ವಾಸವಾಗಿದ್ದ, ಮಾದಕ ವಸ್ತು ಕಳ್ಳಸಾಗಣೆದಾರರಿಂದ 4 ನಕಲಿ ಪಾಸ್‌ಪೋರ್ಟ್‌ಗಳು ಮತ್ತು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೊಂದು ಕೋಟ್ಯಾಂತರ ರೂ. ವಹಿವಾಟಿನ ದಂಧೆಯಾಗಿದ್ದು ಬೃಹತ್ ನಗರಗಳ ಐಶಾರಾಮಿ ಹೊಟೇಲ್‌ಗಳಿಗೆ ಡ್ರಗ್ಸ್ ಸ್ಲಪೈ ನಡೆಸುತ್ತಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!