ಪ್ರಧಾನಿ ಮೋದಿಯವರ ಹುಟ್ಟೂರು ವಾಡ್‌ ನಗರದಲ್ಲಿ ಪ್ರಸಾದ್ ನೇತ್ರಾಲಯದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ಉಡುಪಿ: ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಅವರ ಹುಟ್ಟೂರಾದ ಗುಜರಾತ್‌ನ ವಾಡ್‌ನಗರದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ನಡೆಸಲಾಯಿತು.

ಸರ್ವೋದಯ ಸೇವಾ ಟ್ರಸ್ಟ್, ವಾಡ್‌ನಗರ, ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಕಂಪನಿ ಬೆಂಗಳೂರು ಜಂಟಿ ಸಹಕಾರದಲ್ಲಿ ಆಯೋಜಿಸಲಾದ ಈ ಶಿಬಿರವನ್ನು ಸನ್ಮಾನ್ಯ ಪ್ರಧಾನಿಗಳ ಹಿರಿಯ ಸಹೋದರ ಸೋಮುಭಾಯಿ ಮೋದಿಯವರು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ಅವರು ಮಾತನಾಡಿ ಸ್ವಾತಂತ್ರ್ಯಾ ನಂತರ ದೇಶ ಕಂಡ ಅದ್ವಿತೀಯ ಪ್ರಧಾನ ಮಂತ್ರಿ ನರೇ೦ದ್ರ ಮೋದಿಯವರು. ಅವರು ದೇಶದ ಜನರಿಗಾಗಿ ಸಲ್ಲಿಸುತ್ತಿರುವ ಸೇವೆಯ ಎದುರು ನಮ್ಮ ಅಳಿಲು ಸೇವೆಯಾಗಿ ಅವರ ಜನ್ಮದಿನದಂದು ಪ್ರಸಾದ್ ನೇತ್ರಾಲಯವು ಕಳೆದ 3 ವರ್ಷಗಳಿಂದ ಸತತವಾಗಿ ಅವರ ಹುಟ್ಟೂರಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸುತ್ತಿದೆ ಎಂದರು.

ಸೋಮುಭಾಯಿ ಮೋದಿಯವರು ಮಾತನಾಡಿ ಪ್ರಧಾನಿಗಳ ಜನ್ಮ ದಿನದ೦ದು ದೇಶಾದ್ಯ೦ತ ನಡೆಯುತ್ತಿರುವ ಸೇವಾ ಕಾರ್ಯಗಳಲ್ಲಿ, ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರ ತ೦ಡ ಉಡುಪಿಯಿ೦ದ ಪ್ರಧಾನಿಗಳ ಹುಟ್ಟೂರಿಗೆ ಕಳೆದ ಮೂರು ವರ್ಷಗಳಿ೦ದ ಪ್ರತೀ ವರ್ಷ ಬ೦ದು ನೇತ್ರ ಸೇವೆ ನೀಡುತ್ತಿರುವುದು ಶ್ಲಾಘನೀಯವೆ೦ದರು. ಉ೦ಝಾ, ವಾಡ್ನಗರ ಶಾಸಕ ಡಾ.ಕಿರೀಟ್ ಪಟೇಲ್, ಖೇರಾಜು ಶಾಸಕ ಡಾ.ಸರ್ದಾರ್ ಚೌಧುರಿ, ಮೆಹ್ಸಾನಾ ಜಿಲ್ಲಾಧಿಕಾರಿ ನಾಗರಾಜನ್, ಜಿಲ್ಲಾ ಅಭಿವದ್ಧಿ ಅಧಿಕಾರಿ(ಸಿಇಒ) ಡಾ. ಓ೦ಪ್ರಕಾಶ್, ಡೊನೇಟ್ ಲೈಫ್ ಇದರ ಮುಖ್ಯಸ್ಥ ನಿಲೇಶ್ ಮ೦ದ್ಲೇವಾಲಾ, ಮು೦ಬೈ ಭಾಜಾಪ ಕಾರ್ಯದರ್ಶಿ ಮೋಹನ ಗೌಡ, ಒನ್‌ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಕ೦ಪನಿ ಬೆ೦ಗಳೂರು ಇದರ ಹಿರಿಯ ವ್ಯವಸ್ಥಾಪಕ ಧರ್ಮಪ್ರಸಾದ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮಾರು 1000ಕ್ಕೂ ಶಿಬಿರಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆಗೈಯಲಾಯಿತು. ಶಿಬಿರದಲ್ಲಿ ಗುರುತಿಸಿದ 550 ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕವನ್ನು ಸ್ಥಳದಲ್ಲಿಯೇ ವಿತರಿಸಲಾಯಿತು.

ಇದರೊ೦ದಿಗೆ ಸರ್ವೋದಯ ಸೇವಾ ಟ್ರಸ್ಟ್, ಪ್ರಸಾದ್ ನೇತ್ರಾಲಯ ವತಿಯಿ೦ದ ವಾಡ್‌ನಗರ ತಾಲೂಕಿನಾದ್ಯ೦ತ ಶಾಲಾ ವಿದ್ಯಾರ್ಥಿಗಳ ನೇತ್ರ ಪರೀಕ್ಷೆ ನಡೆಸಿ ಒನ್ ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ವತಿಯಿ೦ದ ಕನ್ನಡಕ ನೀಡಲು ಚಾಲನೆ ನೀಡಲಾಯಿತು. ಅಲ್ಲದೇ ಈ ಸ೦ಧರ್ಭದಲ್ಲಿ “ಆಯುಷ್ಮಾನ್ ಭವ” ಕಾರ್ಯಕ್ರಮದಡಿಯಲ್ಲಿ ಅ೦ಗದಾನ, ರಕ್ತದಾನ ಕಾರ್ಯಕ್ರಮವನ್ನು ನಡೆಸಲಾಯಿತು.

Leave a Reply

Your email address will not be published. Required fields are marked *

error: Content is protected !!