ಸಂಸತ್ ಸಿಬ್ಬಂದಿಯ ಸಮವಸ್ತ್ರದ ಮೇಲೆ ಕಮಲದ ಚಿಹ್ನೆ- ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಸಂಸತ್ ಸಿಬ್ಬಂದಿಯ ಹೊಸ ಸಮವಸ್ತ್ರದ ಮೇಲೆ ಆಡಳಿತ ಪಕ್ಷದ ಚುನಾವಣಾ ಚಿಹ್ನೆ ‘ಕಮಲ’ ಮುದ್ರಿಸಲಾಗಿದೆ ಎಂಬ ವರದಿಗಳ ನಡುವೆ ಬಿಜೆಪಿ ಸಂಸತ್ತನ್ನು ಏಕಪಕ್ಷೀಯವಾಗಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ರಾಷ್ಟ್ರೀಯ ಪ್ರಾಣಿ ಹುಲಿ ಅಥವಾ ಪಕ್ಷಿಯಾದ ನವಿಲು ಬಿಟ್ಟು ಕಮಲವನ್ನು ಏಕೆ ಹೊಸ ಸಮವಸ್ತ್ರದಲ್ಲಿ ಸೇರಿಸಲಾಗುತ್ತಿದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ವಿಪ್ ಮಾಣಿಕ್ಕಂ ಟ್ಯಾಗೋರ್ ಪ್ರಶ್ನಿಸಿದ್ದಾರೆ.

ಈ ಕುರಿತು #NewDressforParliamentStaff” ಹ್ಯಾಷ್ ಟ್ಯಾಗ್ ಬಳಸಿ ಎಕ್ಸ್ ಖಾತೆಯಲ್ಲಿ ಬಿಜೆಪಿ ಪ್ರಶ್ನಿಸಿರುವ ಟ್ಯಾಗೋರ್, ‘ಕಮಲ ಮಾತ್ರ ಏತಕ್ಕೆ? ನವಿಲು ಅಥವಾ ಹುಲಿ ಏಕೆ ಇಲ್ಲ? ಓಹ್, ಅವುಗಳು ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆ ಅಲ್ಲ. ಯಾಕೆ ಈ ಪತನ ಸರ್ ಓಂ ಬಿರ್ಲಾ ಎಂದು ಕೇಳಿದ್ದಾರೆ. ಸಂಸತ್ತಿನ ಸಿಬ್ಬಂದಿಯ ಹೊಸ ಸಮವಸ್ತ್ರದ ಮೇಲೆ ಕಮಲದ ಚಿಹ್ನೆ ಮುದ್ರಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. 

“ಈ ರೀತಿಯ ಸಣ್ಣತನ ಸರಿಯಲ್ಲ, ಬಿಜೆಪಿ ಬೆಳೆಯುತ್ತಿದ್ದು, ಸಂಸತ್ತನ್ನು ಏಕಪಕ್ಷೀಯ ವಿಷಯವನ್ನಾಗಿ ಮಾಡಬಾರದು. ಸಂಸತ್ತು ಪಕ್ಷದ ಚಿಹ್ನೆಯ ಭಾಗವಾಗುತ್ತಿದೆ. ಇದು ದುರದೃಷ್ಟಕರ. ಸಂಸತ್ತು ಎಲ್ಲಾ ಪಕ್ಷಗಳಿಗಿಂತ ಮೇಲಿತ್ತು. ಇದು ಬಿಜೆಪಿಯು ಇತರ ಎಲ್ಲ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬುದನ್ನು ತೋರಿಸುತ್ತಿದೆ ಎಂದು ಟ್ಯಾಗೋರ್ ಆರೋಪಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!