ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ 55 ನಿಮಿಷದ ‘ಒಂದು ಪ್ರೇಮಕಥೆ’ ನಾಟಕ ಪ್ರದರ್ಶನ

ಉಡುಪಿ: ಜು.31ರಂದು ಕರ್ನಾಟಕ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ 55 ನಿಮಿಷದ ಒಂದು ಪ್ರೇಮಕಥೆ ಎಂಬ ನಾಟಕ ಪ್ರದರ್ಶನವನ್ನು ಆಯೋಜಿಸಿದ್ದು, ರಂಗಭೂಮಿ ಉಡುಪಿ ಸಹಭಾಗಿತ್ವ ಉಡುಪಿ ಎಂಜಿಎಂ ಗೀತಾಂಜಲಿ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ರಾಜ್ಯದ 31 ಜಿಲ್ಲೆಗಳ ರಂಗಮಂದಿರಗಳಲ್ಲಿ 31 ಕಲಾವಿದರಿಂದ ಏಕಕಾಲಕ್ಕೆ ನಡೆಯಲಿರುವ ಏಕವ್ಯಕ್ತಿ ನಾಟಕ ಪ್ರದರ್ಶನ ಎಂಬುದು ಈ ನಾಟಕದ ಮತ್ತೊಂದು ವಿಶೇಷ. ಈ ನಾಟಕಕ್ಕೆ 31 ಜಿಲ್ಲೆಗಳಲ್ಲಿ 31 ವಿನ್ಯಾಸಕರು, 31 ರಂಗದ ನೇಪಥ್ಯ ಕಲಾವಿ ದರು, 31 ಸ್ಥಿರ ಛಾಯಾಗ್ರಾಹಕರು, 31 ವಿಡಿಯೋಗ್ರಾಫರ್‌ಗಳು, 31 ಸಂಘಟಕರು, 31 ಸಂಗೀತಗಾರರು ನೆರವು ನೀಡಲಿದ್ದಾರೆ ಎಂದು ರಂಗ ಸಂಘಟಕ ಕಲಾವಿದೆ ನಯನಾ ಸೂಡ ತಿಳಿಸಿದ್ದಾರೆ.

2015ರಲ್ಲಿ ಬೆಂಗಳೂರಿನಲ್ಲಿ 9 ಕಲಾವಿದರು, 9 ಸ್ಥಳದಲ್ಲಿ ಮೊದಲ ಪ್ರದರ್ಶನ ನೀಡುವ ಮೂಲಕ ಲಿಮ್ಕಾ ದಾಖಲೆ ಸೃಷ್ಟಿಸಲಾಗಿತ್ತು. ಈಗ ಕರ್ನಾಟಕದಾದ್ಯಂತ 31 ಏಕ ವ್ಯಕ್ತಿ ಪ್ರಯೋಗಗಳ ಮೂಲಕ ಹೊಸ ದಾಖಲೆ ಸೃಷ್ಟಿಸಲು ಮುಂದಾಗಿದ್ದೇವೆ. ನಾಟಕದ ರಚನೆ, ನಿರ್ದೇಶನ, ಸಂಗೀತ ನಿರ್ದೇಶನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತೂದ್ ಬಿಸ್ಮನ್ ಖಾನ್ ಪ್ರಶಸ್ತಿ ಪುರಸ್ಕೃತರಾದ ರಾಜಗುರು ಹೊಸಕೋಟೆ ಅವರದ್ದು.

ರಂಗಪಯಣ ತಂಡದಲ್ಲಿ ಕಳೆದ 9 ವರ್ಷಗಳಿಂದ ತೊಡಗಿಸಿಕೊಂಡಿರುವ ಕಲಾವಿದ ಶಶಿಕೃಷ್ಣ ಅವರಿಂದ ಉಡುಪಿಯ ಎಂಜಿಎಂ ಕಾಲೇಜೀನ‌ ನೂತನ‌ ರವೀಂದ್ರ ಮಂದಿರದಲ್ಲಿ ಇಂದು ಸಂಜೆ 7ಕ್ಕೆ 55 ನಿಮಿಷದ “ಒಂದು ಪ್ರೇಮಕಥೆ” ನಾಟಕ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!