ಉಡುಪಿ ವಿದ್ಯಾರ್ಥಿನಿ ಪ್ರಕರಣವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ: ಡಾ.ಜಿ ಪರಮೇಶ್ವರ್

ತುಮಕೂರು: ಉಡುಪಿ ಕಾಲೇಜಿನ ವಿದ್ಯಾರ್ಥಿನಿ ಶೌಚೌಲಯಕ್ಕೆ ತೆರಳಿದ್ದಾಗ ವಿಡಿಯೊ ಚಿತ್ರೀಕರಣ ಮಾಡಿದ್ದ ಘಟನೆ ಬಗ್ಗೆ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳುತ್ತದೆ. ಘಟನೆ ಬಹಳ ಸಣ್ಣದು. ಅದಕ್ಕೆ ರಾಜಕೀಯ ಬಣ್ಣ ಕೊಡುವ ಅಗತ್ಯವಿಲ್ಲ, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿಂದು ಮಾತನಾಡಿದ ಅವರು, ಸರ್ಕಾರ ನಡೆಸುವಂತವರು ಇಂತಹ ಘಟನೆಗಳನ್ನು ಲಘುವಾಗಿ ತೆಗೆದುಕೊಂಡಿಲ್ಲ. ಆದರೆ ಬಿಜೆಪಿಯವರು ಬೇರೆ ಅರ್ಥ, ವ್ಯಾಖ್ಯಾನದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಜನರು ಕೊಟ್ಟ ತೀರ್ಪಿನಂತೆ ಜವಾಬ್ದಾರಿಯಿಂದ ಸರ್ಕಾರ ನಡೆಸುತ್ತೇವೆ ಎಂದರು.ಜನ ಕಾಂಗ್ರೆಸ್ ಪರವಾಗಿ ತೀರ್ಪು ಕೊಟ್ಟು 136 ಸೀಟು ಗೆಲ್ಲಿಸಿದ್ದಾರೆ, ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಅನುಷ್ಠಾನಗಳನ್ನು ಜಾರಿಗೆ ತರುವುದಾಗಿ ಮಾತು ಕೊಟ್ಟಿದ್ದೇವೆ, ಅದನ್ನು ಜಾರಿಗೆ ತರುತ್ತಿದ್ದೇವೆ. ಅದಕ್ಕೆ  ಹೊಟ್ಟೆ ಉರಿಯಿಂದ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದರು.

ಸಿಲ್’ಪಿ ಸಭೆಯಲ್ಲಿ ಶಾಸಕರ ಸಮಸ್ಯೆ ಚರ್ಚೆ: ಕಾಂಗ್ರೆಸ್ ನಲ್ಲಿ ಹಿಂದಿನ ಶಾಸಕಾಂಗ ಸಭೆ ಅರ್ಧದಲ್ಲಿಯೇ ನಿಂತುಹೋಗಿತ್ತು. ರಾಹುಲ್ ಗಾಂಧಿಯವರು ಎಲ್ಲಾ ಶಾಸಕರನ್ನು ಮತ್ತು ಸಚಿವರನ್ನು ಭೇಟಿ ಮಾಡಬೇಕೆಂದು ಹೇಳಿದ್ದ ಕಾರಣ ಸಭೆ ನಿಂತುಹೋಗಿತ್ತು.

ಅದರ ಮುಂದುವರಿದ ಭಾಗವಾಗಿ ಶಾಸಕರು ಸಭೆ ಕರೆಯಬೇಕೆಂದು ಒತ್ತಾಯಿಸಿದ್ದರಿಂದ ನಿನ್ನೆ ಶಾಸಕಾಂಗ ಪಕ್ಷ ಸಭೆ ನಡೆಯಿತು.ಕೆಲವು ಶಾಸಕರು ಪತ್ರ ಬರೆದಿದ್ದರು. ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಶಾಸಕರಿಗೆ ಪತ್ರ ಬರೆಯುವುದು ಅಷ್ಟು ಸೂಕ್ತವಲ್ಲ, ಮೌಖಿಕವಾಗಿ ನಿಮ್ಮ ಸಮಸ್ಯೆ ಹೇಳಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

ಸಹಿ ಅಭಿಯಾನ ಮಾಡುವ ಉದ್ದೇಶದಲ್ಲಿ ಮಾಡಿರಲಿಲ್ಲ ಎಂದು ಮುಖ್ಯಮಂತ್ರಿಗಳು,ಪಕ್ಷದ ಅಧ್ಯಕ್ಷರ ಕ್ಷಮೆಯನ್ನು ಶಾಸಕರು ಕೇಳಿದ್ದಾರೆ. ಅವರ ಸಮಸ್ಯೆಗಳು ಚರ್ಚೆಯಾದವು ಎಂದರು.ಜಿಲ್ಲಾವಾರು ಶಾಸಕರು, ಮಂತ್ರಿಗಳ ಸಭೆಯನ್ನು ಮುಂದಿನ ದಿನಗಳಲ್ಲಿ ಸಿಎಂ ಕರೆಯಲಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!