ಶ್ರೀಮಾ ರೈ ‘ರಾಜೀವ್ ಗಾಂಧಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ – 2023’ ಗರಿ
ಪುತ್ತೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ ಸ್ಮರಣಾರ್ಥವಾಗಿ ಕೊಡಲ್ಪಡುವ ‘ರಾಜೀವ್ ಗಾಂಧಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ 2023’ ಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಶ್ರೀಮಾ ರೈ ಭಾಜನರಾಗಿದ್ದಾರೆ.
ಶ್ರೀಮಾ ರೈ ರವರು ಪುತ್ತೂರಿನ ಬೆಳ್ಳಿಪ್ಪಾಡಿ ಕುಟುಂಬ ಟ್ರಸ್ಟ್ ನ ಅಧ್ಯಕ್ಷರಾದ ನೇಮಿರಾಜ್ ರೈ ಮತ್ತು ನಿಟ್ಟೆಗುತ್ತು ವಿಶಾಲಿ ಎನ್. ರೈ ರವರ ಪುತ್ರಿಯಾಗಿದ್ದಾರೆ. ಶ್ರೀಮಾ ರೈ ರವರ ಸಹೋದರ ಶ್ರೀಮಂತ್ ರೈ ಅಮೇರಿಕಾದಲ್ಲಿ ನೆಲೆಸಿದ್ದಾರೆ.
ಮಿಸೆಸ್ ಇಂಡಿಯಾ ಗ್ಲೋಬ್ 2009 ಕಿರೀಟವನ್ನು ಮುಡಿಗೇರಿಸಿರುವ ಶ್ರೀಮಾ ರವರು ಸದ್ಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಉತ್ತಮ ಕಾರ್ಯ ವೈಖರಿಯ ಮೂಲಕ ಪ್ರಸಿದ್ಧರಾಗಿದ್ದಾರೆ.
ಮುಂಬೈನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಮೆರೈನ್ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಕಂಪನಿಯನ್ನು ಮುನ್ನಡೆಸುತ್ತಿರುವ ಆದಿತ್ಯ ರೈ ರವರೊಂದಿಗೆ ವಿವಾಹವಾಗಿರುವ ಶ್ರೀಮಾರವರು ಇಬ್ಬರು ಪುತ್ರರನ್ನು ಹೊಂದಿದ್ದಾರೆ. ತನ್ನ ಕುಟುಂಬವನ್ನು ನಿಭಾಯಿಸುತ್ತಾ.., ಪೂರ್ಣ ಸಮಯದೊಂದಿಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಉತ್ತಮ ಕಾರ್ಯ ವೈಖರಿ ಮೂಲಕ ‘ರಾಜೀವ್ ಗಾಂಧಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ 2023’ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.