ಪಕ್ಕದ ಮನೆ ಆಂಟಿಯಂತೆ ಕಾಣುವ ನಾನು ‘ದೇವರ ಆಟ’ ಎಂದು ಹೇಳಿದ್ದನ್ನು ವ್ಯಂಗ್ಯ ಮಾಡುತ್ತಿದ್ದಾರೆ: ನಿರ್ಮಲಾ ಸೀತಾರಾಮನ್

ನವದೆಹಲಿ:ಒಬ್ಬ ಸರಳ ಹಣಕಾಸು ಸಚಿವೆ ‘ಇದು ದೇವರ ಆಟ’ಎಂದು ಹೇಳಿದ ಮಾತುಗಳನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಅದೇ ‘ಫೋರ್ಸ್ ಮಜೂರ್’ಎಂಬ ಶಬ್ದವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಗಳನ್ನು ಪ್ರತಿಪಕ್ಷದವರು ಸೇರಿದಂತೆ ಹಲವರು ಟೀಕಿಸಿದರು ಏಕೆಂದರೆ ನಾನು ನೋಡಲು ಸರಳವಾಗಿ ಪಕ್ಕದ ಮನೆಯ ಆಂಟಿಯಂತೆ ಕಾಣುತ್ತೇನೆ, ಆದರೆ ಅಂದು ನಾನು ಆಡಿರುವ ಮಾತುಗಳನ್ನು ತಿರುಚಿದ್ದು ನೋಡಿದರೆ ವಿರೋಧ ಪಕ್ಷದವರ ಬೇಜವಾಬ್ದಾರಿ ವರ್ತನೆ ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಆಗಸ್ಟ್ 27ರಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ಕೋವಿಡ್-19 ಸಾಂಕ್ರಾಮಿಕದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿದೆ. ಇದೆಲ್ಲ ದೇವರ ಆಟ, ಹಣಕಾಸಿನ ಮೇಲೆ ಇದು ಪರಿಣಾಮವನ್ನುಂಟು ಮಾಡಿದೆ ಎಂದಿದ್ದರು. ಅವರು ಇಷ್ಟು ಹೇಳಿದ್ದೇ ತಡ, ದೇಶಾದ್ಯಂತ ಹಲವರು ಇದಕ್ಕೆ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಅನೇಕ ಜನರು ಜಿಎಸ್ಟಿ ಪರಿಹಾರದ ವಿಷಯದಲ್ಲಿ ಮಾತನಾಡಿದರು, ನನ್ನ ದೇವರ ಆಟ ಹೇಳಿಕೆಯನ್ನು ಹಲವಾರು ಬಾರಿ ಹಲವು ರೀತಿಯಲ್ಲಿ ಉಲ್ಲೇಖಿಸಿದ್ದಾರೆ. ಅದಕ್ಕಾಗಿ ನನಗೆ ಸಂತೋಷವಾಗಿದೆ. ಅಸಾಮಾನ್ಯ ಪರಿಸ್ಥಿತಿಯನ್ನು ವ್ಯಕ್ತಪಡಿಸಲು ಜನರು ಮಜೂರ್ ಎಂಬ ಲ್ಯಾಟಿನ್ ಅಭಿವ್ಯಕ್ತಿಯನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಸರಳ ಮಹಿಳಾ ಹಣಕಾಸು ಸಚಿವೆಯಾದ ನಾನು  ದೇವರ ಆಟ ಎಂದು ಹೇಳಿದೆ, ಅದನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಏನ್ಸಾರ್ ಇದು ಎಂದು ಲೋಕಸಭಾಧ್ಯಕ್ಷರನ್ನು ಪ್ರಶ್ನಿಸಿದರು.

ಕಕ್ಷಿದಾರರಿಗೆ ಕೋರ್ಟ್ ನಲ್ಲಿ ಬಲವಂತದ ಮಜೂರ್ ಹೇಳಿಕೆ ಹೊಂದಿಕೆಯಾಗುತ್ತದೆ, ಆದರೆ ದೇವರ ಆಟ ಆಗುವುದಿಲ್ಲ, ಯಾಕೆಂದರೆ ನಾನು ಹಣಕಾಸು ಸಚಿವೆ ಪಕ್ಕದ ಮನೆ ಆಂಟಿ ಥರ ಕಾಣುತ್ತೇನೆ ಅಲ್ಲವೇ ಎಂದು ನಿರ್ಮಲಾ ಸೀತಾರಾಮನ್ ಬೇಸರದಿಂದ ಹೇಳಿದರು.

1 thought on “ಪಕ್ಕದ ಮನೆ ಆಂಟಿಯಂತೆ ಕಾಣುವ ನಾನು ‘ದೇವರ ಆಟ’ ಎಂದು ಹೇಳಿದ್ದನ್ನು ವ್ಯಂಗ್ಯ ಮಾಡುತ್ತಿದ್ದಾರೆ: ನಿರ್ಮಲಾ ಸೀತಾರಾಮನ್

  1. No doubt at all Madam, to my knowledge no body have insulted you, but they have pointed out your responsibility towards the nation.
    Everything in the world is God’s play, we are just the actors of the play. God always puts us in test. We have to take the test and come out successfully. Yes madam you have really failed,do not care the opposition, take the challenge and pass the test. God will be pleased and so the people of India. Aunties are always strong. Good luck

Leave a Reply

Your email address will not be published. Required fields are marked *

error: Content is protected !!