ಮಣಿಪಾಲ: ಬೆಳ್ಳಂಬೆಳಗ್ಗೆ ಸ್ಕ್ರೂಡ್ರೈವರ್ ನಲ್ಲಿ ಇರಿದು ಯುವಕನ ದರೋಡೆ!
ಉಡುಪಿ: (ಉಡುಪಿಟೈಮ್ಸ್ ವರದಿ) ಬೆಳ್ಳಂಬೆಳಗ್ಗೆ ಬೈಕ್ ನಲ್ಲಿ ಬಂದ ತಂಡವೊಂದು ಮಣಿಪಾಲ ಪ್ರೆಸ್ ಉದ್ಯೋಗಿಯೊರ್ವನಿಗೆ ಸ್ಕ್ರೂಡ್ರೈವರ್ ನಲ್ಲಿ ಇರಿದು ಮೊಬೈಲ್ ಕಸಿದು ದರೋಡೆಗೈದ ಘಟನೆ ಅಲೆವೂರು ಗುಡ್ಡೆಯಂಗಡಿ ಬಳಿ ಶನಿವಾರ ನಡೆದಿದೆ.
ಮಣಿಪಾಲ ಪ್ರೆಸ್ ನಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುತ್ತಿದ್ದ ಉದ್ಯಾವರ ನಿವಾಸಿಯೊರ್ವರು ಮುಂಜಾನೆ 5.15 ಸುಮಾರಿಗೆ ಅಲೆವೂರು ಗುಡ್ಡೆಯಂಗಡಿ ಬಳಿ ಹೋಗುತ್ತಿರುವ ಸಂದರ್ಭ ಎದುರಿನಿಂದ ಬೈಕ್ ನಲ್ಲಿ ಬಂದ ಇಬ್ಬರು ಸವಾರನನ್ನು ತಡೆದು ಬೆಲೆ ಬಾಳುವ ವಸ್ತು ನೀಡುವಂತೆ ಬೆದರಿಸಿದ್ದರು ಎನ್ನಲಾಗಿದೆ, ಮೊದಲು ನಿರಾಕರಿಸಿದಾಗ ದರೋಡೆಕೋರರು ಸ್ಕ್ರೂಡ್ರೈವರ್ ತೆಗೆದು ಯುವಕನ ಹೊಟ್ಟೆಗೆ ಇರಿಯಲು ಮುಂದಾಗಿದ್ದರು.
ಇದನ್ನರಿತ ಯುವಕ ತಕ್ಷಣ ಕೈಯಲ್ಲಿ ತಡೆದಿದ್ದ ಎನ್ನಲಾಗಿದೆ. ನಂತರ ಯುವಕ ಬೊಬ್ಬ ಹೊಡಿದಿದ್ದು ಇದರಿಂದ ಹೆದರಿದ ದರೋಡೆಕೋರರು ಯುವಕನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಸ್ಥಳೀಯರು ಯುವಕನ ಬೊಬ್ಬೆ ಕೇಳಿ ಹೊರ ಬಂದಾಗ ದರೋಡೆಕೋರರು ಇತ ಕುಡಿದು ಬಿದ್ದಿದ್ದಾನೆಂದು ಹೇಳಿ ಸ್ಥಳದಿಂದ ಪರಾರಿಯಾದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಾಲ್ಕೈದು ಟೀಮ್ ದರೋಡೆಗೆ ಇಳಿದಿದೆಯೇ?
ಇಂದು ಬೆಳ್ಳಂಬೆಳಗ್ಗೆ ಇಂದ್ರಾಳಿ, ರಾಜೀವ ನಗರ ಪ್ರದೇಶದಲ್ಲಿ ಹಲವರನ್ನು ಬೆದರಿಸಿ ಹಣ, ಚಿನ್ನಾಭರಣ, ಮೊಬೈಲ್ ದೋಚುವ ತಂಡ ದರೋಡೆಗೆ ಇಳಿದಿದೆಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.
ಹದಿನೈದು ದಿನಗಳ ಹಿಂದೆ ಇಂದ್ರಾಳಿ ಪೆಟ್ರೋಲ್ ಪಂಪಿನಲ್ಲೂ ಯುವಕನೊರ್ವ ಹಣ ದೊಚಲು ಪ್ರಯತ್ನಿಸಿದ್ದ ಎಂದು ಅಲ್ಲಿನ ಮಾಲಕರು ತಿಳಿಸಿದ್ದಾರೆ.
ಒಂದೇ ತಂಡ ಕೃತ್ಯ: ಉಡುಪಿ ಮತ್ತು ಮಣಿಪಾಲದ ನಾಲ್ಕು ಕಡೆಗಳಲ್ಲಿ ದರೋಡೆ ನಡೆಸಿರುವುದು ಒಂದೇ ತಂಡ ಎಂದು ಪ್ರಾಥಮಿಕ ತನಿಖೇಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ನಗರ ಠಾಣೆ ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Emmiediate, strict action should be taken against the looting gang.