ಡ್ರಗ್ಸ್ ಸಾಗಾಟ: ಮಂಗಳೂರಿನಲ್ಲಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ

ಮಂಗಳೂರು: ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಅಮನ್ ಅಲಿಯಾಸ್ ಕಿಶೋರ್ ಶೆಟ್ಟಿಯನ್ನು ಸೆಪ್ಟೆಂಬರ್ 19 ರ ಶನಿವಾರ ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತ ಮಾದಕ ವಸ್ತು ಸಾಗಾಟ ನಡೆಸಿದ್ದನೆಂದು ವರದಿಯಾಗಿದೆ.

ಕಿಶೋರ್ ಬಾಲಿವುಡ್ ಚಿತ್ರ  ‘ಎಬಿಸಿಡಿ’ ಯಲ್ಲಿ ನಟಿಸಿದ್ದರು. ಅಲ್ಲದೆ ಜೀ ಟಿವಿಯ  ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಟೆಲಿವಿಷನ್ ರಿಯಾಲಿಟಿ ಡ್ಯಾನ್ಸ್ ಸ್ಪರ್ಧೆಯ ಸೀಸನ್ 2 ರಲ್ಲಿಯೂ ಭಾಗವಹಿಸಿದ್ದ ಅವರು ಅಗ್ರ ಎಂಟರ ಘಟ್ಟ ತಲುಪಿದ್ದರು.

ಮಾದಕವಸ್ತು ಜಾಲ ಬೇಧಿಸಲು ರಾಜ್ಯಾದ್ಯಂತ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಇಂದು ಈ ಡ್ಯಾನ್ಸರ್ ಬಂಧನವಾಗಿದೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ ದಿನಕ್ಕೊಂದು  ಹೊಸ ತಿರುವು ಪಡೆಯುತ್ತಿದ್ದು ಇಂದು ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ಬುಲಾವ್ ನೀಡೀದೆ.

Leave a Reply

Your email address will not be published. Required fields are marked *

error: Content is protected !!