ನಿಯಮ ಉಲ್ಲಂಘನೆ: ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಹೊರಕ್ಕೆ!
ಭಾರತದಲ್ಲಿ ಹಣಕಾಸು ವ್ಯವಹಾರಕ್ಕೆ ಬಳಕೆಯಾಗುತ್ತಿರುವ ಜನಪ್ರಿಯ ಅಪ್ಲಿಕೇಷನ್ ಪೇಟಿಎಂ ಅನ್ನು ಗೂಗಲ್ ಪ್ಲೇ ನಿಂದ ತೆಗೆದುಹಾಕಲಾಗಿದೆ.
ಪೇಟಿಎಂ ಅಪ್ಲಿಕೇಷನ್ ವ್ಯವಹಾರಗಳು ತಮ್ಮ ಪಾಲಿಸಿಗಳಿಗೆ ವಿರುದ್ಧವಾಗಿರುವ ಕಾರಣ ಅದನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕುತ್ತಿರುವುದಾಗಿ ಗೂಗಲ್ ಹೇಳಿಕೆ ತಿಳಿಸಿದೆ.
“ಪೇಟಿಎಂ ತನ್ನ ಆ್ಯಪ್ನಲ್ಲಿ ಮನಿ ಗ್ಯಾಬ್ಲಿಂಗ್ ಅಥವಾ ಆನ್ಲೈನ್ ಕ್ಯಾಸಿನೋಗಳಿಗೆ ಅವಕಾಶ ನೀಡಿದೆ, ” ಎಂದು ಗೂಗಲ್ ಆರೋಪಿಸಿದೆ.
ಈ ಹಿಂದೆ, ಸ್ಪೋರ್ಟ್ಸ್ ಬೆಟ್ಟಿಂಗ್ಗೆ ಅನುಕೂಲವಾಗುವಂತಹ ಅಪ್ಲಿಕೇಶನ್ಗಳನ್ನು ಅನುಮತಿಸುವುದಿಲ್ಲ ಮತ್ತು ಅಂತಹ ಅಪ್ಲಿಕೇಶನ್ಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದು ಹಾಕುವುದಾಗಿ ಗೂಗಲ್ ಹೇಳಿತ್ತು.
‘ನಾವು ಆನ್ಲೈನ್ ಕ್ಯಾಸಿನೊಗಳನ್ನು ಅನುಮತಿಸುವುದಿಲ್ಲ ಅಥವಾ ಕ್ರೀಡಾ ಬೆಟ್ಟಿಂಗ್ಗೆ ಅನುಕೂಲವಾಗುವ ಯಾವುದೇ ಅನಿಯಂತ್ರಿತ ಜೂಜಿನ ಅಪ್ಲಿಕೇಶನ್ಗಳನ್ನು ಬೆಂಬಲಿಸುವುದಿಲ್ಲ. ನಿಜವಾದ ಹಣ ಅಥವಾ ನಗದು ಬಹುಮಾನಗಳನ್ನು ಗೆಲ್ಲಲು ಪಾವತಿಸಿದ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುಮತಿಸುವ ಅಪ್ಲಿಕೇಶನ್ ಗ್ರಾಹಕರನ್ನು ಬೇರೊಂದು ವೆಬ್ಸೈಟ್ಗೆ ಕರೆದೊಯ್ಯುತ್ತಿದ್ದರೆ ಇದು ನಮ್ಮ ನೀತಿಗಳ ಉಲ್ಲಂಘನೆಯಾಗಿದೆ ‘ಎಂದು ಗೂಗಲ್ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ. ಸಂಭಾವ್ಯ ಹಾನಿಯಿಂದ ಬಳಕೆದಾರರನ್ನು ರಕ್ಷಿಸಲು ಈ ನೀತಿಗಳು ಜಾರಿಯಲ್ಲಿವೆ ಎಂದು ಅದು ಹೇಳಿದೆ.
ಗ್ರಾಹಕರಿಗೆ ಸುರಕ್ಷಿತತ ಅನುಭವವನ್ನು ಒದಗಿಸಲು ಗೂಗಲ್ ಪ್ಲೇ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಡೆವಲಪರ್ಗಳಿಗೆ ಸುಸ್ಥಿರ ವ್ಯವಹಾರಗಳನ್ನು ನಿರ್ಮಿಸಲು ಅಗತ್ಯವಾದ ವೇದಿಕೆ ಮತ್ತು ಸಾಧನಗಳನ್ನು ಸಹ ನಾವು ನೀಡುತ್ತೇವೆ ಎಂದು ಪ್ರಸಿದ್ದ ಸಂಸ್ಥೆ ಗೂಗಲ್ ಹೇಳಿದೆ. ‘ನಮ್ಮ ಜಾಗತಿಕ ನೀತಿಗಳನ್ನು ಯಾವಾಗಲೂ ನಮ್ಮ ಎಲ್ಲ ಮಧ್ಯಸ್ಥಗಾರರ ಒಳ್ಳೆಯದನ್ನು ಪರಿಗಣಿಸಿ ಆ ಗುರಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗುತ್ತದೆ. ‘ಎಂದು ಅದು ಹೇಳಿದೆ.
ಇನ್ನು ಪೇಟಿಎಂ ಸಹ ಈ ಬಗ್ಗೆ ಟ್ವೀಟ್ ಮಾಡಿ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ