ಮುನಿಯಾಲು ಗೋಧಾಮದ ಕೀರ್ತಿ ಬೆಳಗಲಿ- ಡಾ. ಚಂದ್ರಶೇಖರ ಕಂಬಾರ

ಮುನಿಯಾಲು ಗೋಧಾಮದಲ್ಲಿ ಸಂಭ್ರಮ – ಮಧುರ ಭಾವಗಳ ಸಂಗಮ

ಹೆಬ್ರಿ : ಸಾಹಸಜೀವಿ ರಾಮಕೃಷ್ಣ ಆಚಾರ್‌ ಸಾಧನೆಯಿಂದ ಮಾಡಿದ ಕೃಷಿ ಕ್ಷೇತ್ರ ಮತ್ತು ಗೋಧಾಮದ ಕಲ್ಪನೆಯನ್ನು ನನಗೆ ವರ್ಣಿಸಲು ಅಸಾಧ್ಯ. ಗೋಧಾಮಕ್ಕೆ ಕಂಡು ನನಗೆ ಅತ್ಯಂತ ಖುಷಿಯಾಗಿದೆ. ಗೋವಿನ ಮೂಲಕ ಗೋಧಾಮವು ವಿಶ್ವಕ್ಕೆ ಅತ್ಯಂತ ದೊಡ್ಡ ಸಂದೇಶವನ್ನು ಮುನಿಯಾಲು ಗ್ರಾಮೀಣ ಪ್ರದೇಶದಿಂದ ನೀಡಿದೆ. ಗೋಧಾಮದ ಕೀರ್ತಿ ವಿಶ್ವದೆತ್ತರಕ್ಕೆ ಬೆಳಗಲಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿದ್ದ ಡಾ. ಚಂದ್ರಶೇಖರ ಕಂಬಾರ ಹಾರೈಸಿದರು.

ಅವರು ಮುನಿಯಾಲು ಗೋಧಾಮದಲ್ಲಿ ಭಾನುವಾರ ಸಂಜೆ ನಡೆದ ಸಂಭ್ರಮ – ಮಧುರ ಭಾವಗಳ ಸಂಗಮ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಮುನಿಯಾಲಿನ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಗೋಧಾಮದಲ್ಲಿ ಸತ್ಯ ಧರ್ಮದ ಮೂಲಕ ಆದ್ಯಾತ್ಮ ಮತ್ತು ಸಮಾಜವನ್ನು ಮುನ್ನಡೆಸುವ ಪುಣ್ಯದ ಕಾರ್ಯವನ್ನು ಕಠಿಣ ಪರಿಶ್ರಮದ ಸಾಧಕ ನಮ್ಮ ಟಾಟಾ ಬಿರ್ಲವೇ ಆಗಿರುವ ಡಾ.ಜಿ. ರಾಮಕೃಷ್ಣ ಆಚಾರ್‌ ಮಾಡುತ್ತಿದ್ದಾರೆ. ಮೂಡಬಿದರೆಯಲ್ಲಿ ಕಲ್ಪವೃಕ್ಷವಾದರೆ ಮುನಿಯಾಲಿನಲ್ಲಿ ಕಾಮಧೇನು ಆಗಿದ್ದಾರೆ.

ಪ್ರಕೃತಿಯ ಕಡೆಗೆ ನಮ್ಮ ನಡೆ ಎಂದು ತೋರಿಸಿಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ. ತಾಂತ್ರಿಕ ಮಹಾವಿದ್ಯಾಲಯಗಳಿಗೆ ವಿಶೇಷ ಮಾಹಿತಿ ನೀಡುವ ಹಂತಕ್ಕೆ ರಾಮಕೃಷ್ಣ ಆಚಾರ್‌ ನಮ್ಮ ನಡುವೆ ಬೆಳದು ನಿಂತು ಮೂಡಬಿದರೆ ಮತ್ತು ಮುನಿಯಾಲಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ರಾಮಕೃಷ್ಣ ಆಚಾರ್‌ ಅವರ ಮುಲಕ ಉಡುಪಿ ಜಿಲ್ಲೆ ಸುಸಜ್ಜಿತ ವಿಜ್ಞಾನ ಪ್ರಯೋಗ ಶಾಲೆಯೂ ಕೂಡ ನಿರ್ಮಾಣವಾಗಿ ನಾಡಿಗೆ ಕೊಡುಗೆಯಾಗಲಿ ಎಂದು ಮೂಡಬಿದರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಜೈನ ಮಠದ ವತಿಯಿಂದ ಗೌರವಿಸಿದರು.

ರಾಮಕೃಷ್ಣ ಆಚಾರ್‌ ಅವರ ಉನ್ನತ ಬೆಳವಣಿಗೆಗೆ ಮೂಲ ಪ್ರೇರಕಶಕ್ತಿ ಮೂಡಬಿದರೆ ಬಾಲಾಜಿ ಉದ್ಯಮ ಸಮೂಹ ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ ಪ್ರಭು ರಾಜಶ್ರೀ ಪ್ರಭು ದಂಪತಿಯನ್ನು ಸಂಭ್ರಮ ಮಧುರ ಭಾವಗಳ ಸಂಗಮ ವಿಶೇಷ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಬಾಲಾಜಿ ಉದ್ಯಮ ಸಮೂಹ ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ ಪ್ರಭು ರಾಮಕೃಷ್ಣ ಆಚಾರ್‌ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸಿದರು.

ಎಸ್‌ ಕೆ ಎಫ್‌ ಉದ್ಯಮ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್‌ ಮಾತನಾಡಿ ನನ್ನ ಸಾಧನೆಯ ಪಥದಲ್ಲಿ ಹೊಸದೊಂದು ಹೆಜ್ಜೆಗುರುತು ಮೂಡಿದ ಸಂಭ್ರಮದಲ್ಲಿ ಎಲ್ಲರೂ ಜೊತೆಯಾದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ಪರಿಶ್ರಮ ಮುಖ್ಯ ಧ್ಯೇಯ ಪ್ರಾಮಾಣಿಕತೆ, ತಾಳ್ಮೆ ಮತ್ತು ವಿಶಾಲ ಹೃದಯ ನಮಗೆ ಅತ್ಯಂತ ಹೆಚ್ಚು ಶಕ್ತಿ ನೀಡುತ್ತದೆ. ಆ ಮೂಲಕ ನಾವು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅದು ನಮಗೆ ಬೆಳಕು ನೀಡುತ್ತದೆ, ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುವುದೇ ನಾವು ಮಾಡುವ ದೇವರ ಸೇವೆ, ರೈತ ಎಲ್ಲರಿಗಿಂತ ಶ್ರೇಷ್ಠನಾಗಬೇಕು, ಅದಕ್ಕೆ ಗೋಧಾಮ ಎಲ್ಲರಿಗೂ ಪ್ರೇರಣೆಯಾಗಬೇಕು ಎಂಬುದು ನಮ್ಮ ಆಶಯ ಎಂದರು.

ಖ್ಯಾತ ಲೆಕ್ಕಪರಿಶೋಧಕ ಮಂಗಳೂರಿನ ಎಸ್‌ ಎಸ್‌ ನಾಯಕ್‌, ಮೂಡಬಿದರೆ ಅರಮನೆಯ ಕುಲದೀಪ್‌ ಜೈನ್‌, ಗೋಧಾಮದ ಸವಿತಾ ಆರ್.‌ ಆಚಾರ್‌, ಮೂಡಬಿದರೆ ಎಸ್‌ ಕೆ ಎಫ್‌ ಉದ್ಯಮ ಸಮೂಹ ಸಂಸ್ಥೆಯ ಸಿಇಒ ಶ್ರೀನಿಧಿ, ಪ್ರಜ್ವಲ್‌ ಆಚಾರ್‌, ತೇಜಸ್‌ ಆಚಾರ್‌, ರಕ್ಷತ್‌ ಆಚಾರ್‌ ಸಹಿತ ಹಲವು ಗಣ್ಯರು ಸಂಭ್ರಮಕ್ಕೆ ಸಾಕ್ಷಿಯಾದರು.ಪುರೋಹಿತ್‌ ದಾಮೋಧರ ಆಚಾರ್‌ ನಿರೂಪಿಸಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!