ವಿಶ್ವದರ್ಜೆಯಲ್ಲಿ ಮುನಿಯಾಲು ಗೋಧಾಮ ನಿರ್ಮಾಣ: ಡಾ.ಚಂದ್ರಶೇಖರ ಕಂಬಾರ ಮೆಚ್ಚುಗೆ

ಹೆಬ್ರಿ : ಮುನಿಯಾಲಿನ ಕೃಷಿ ಕ್ಷೇತ್ರವನ್ನು ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡು ಕ್ರಾಂತಿಕಾರಕ ರೀತಿಯಲ್ಲಿ ಆಧುನಿಕವಾಗಿ ಮಾರ್ಪಾಡಿಸಿ ಗೋಧಾಮವನ್ನು ವಿಶ್ವದ ಮಟ್ಟಕ್ಕೆ ವಿಶೇಷ ಪರಿಕಲ್ಪನೆಯ ಮೂಲಕ ಏರಿಸಿದ್ದಾರೆ. ತೆರೆಮರೆಯ ಸಾಧಕ ರಾಮಕೃಷ್ಣ ಆಚಾರ್‌ ಅವರೊಬ್ಬ ಅದ್ಬುತ ಸಾಧಕ, ಅತೀ ಸಣ್ಣ ವಿಚಾರಕ್ಕೆ ವಿಶ್ವಮಟ್ಟದ ಮಾನ್ಯತೆ ಸಿಗುವ ರೀತಿ ರೂಪಿಸುತ್ತಾರೆ. ಅದಕ್ಕೆ ಮುನಿಯಾಲಿನ ಗೋಧಾಮವೇ ಸಾಕ್ಷಿ ಎಂದು . ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಭಾನುವಾರ ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಮುನಿಯಾಲಿನ ಸಂಜೀವಿನಿ ಫಾರ್ಮ್‌ಮತ್ತು ಡೈರಿ ಗೋಧಾಮದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದರು. ಇತ್ತೀಚಿನ ಕೆಲವು ಕಾಲಘಟ್ಟದ ಜೀವನ ಜಂಟಾಟದಲ್ಲಿ ದೂರವಾಗುತ್ತಿದ್ದ ಗೋವುಗಳನ್ನು ಪ್ರೀತಿಸಿ ಪೂಜಿಸಿ ಗೌರವಿಸುವ ಪುಣ್ಯದ ಕಾರ್ಯವನ್ನು ಮುನಿಯಾಲು ಗೋಧಾಮ ಮತ್ತೇ ಜಗತ್ತಿಗೆ ತೋರಿಸಿಕೊಟ್ಟಿದೆ. ಮಹಿಳೆಯರನ್ನು ಶೋಷಿಸಿದಂತೆ ಗೋವುಗಳನ್ನು ಶೋಷಿಸಲಾಗುತ್ತಿತ್ತು. ಈಗ ಗೋವನ್ನು ಪೂಜಿಸುವ ಕಾಲ ಮತ್ತೇ ಬಂದಿದೆ. ಗೋವನ್ನು ಪ್ರೀತಿಸಿ ಪೂಜಿಸುವುದರಿಂದ ಮನೆಯಾಕೆಯನ್ನು ಉತ್ಕ್ತಷ್ಟವಾಗಿ ಪ್ರೀತಿಸಿದಂತೆ. ಮುನಿಯಾಲು ಗೋಧಾಮದ ಮೂಲಕ ಛಲಬಿಡದ ಸಾಧಕ ಡಾ.ಜಿ.ರಾಮಕೃಷ್ಣ ಆಚಾರ್‌ ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದು ಡಾ. ಚಂದ್ರಶೇಖರ ಕಂಬಾರ ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!