ಶಬರಿಮಲೆ ಯಾತ್ರಿಗಳು ತೆರಳುತ್ತಿದ್ದ ಬಸ್‌ ಪಲ್ಟಿ- 20ಕ್ಕೂ ಅಧಿಕ ಮಂದಿ ಗಾಯ

ತಿರುವನಂತಪುರಂ ಮಾ.28: ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್ ಬಳಿಯ ಎಲವುಂಕಲ್ ನಲ್ಲಿ ಶಬರಿಮಲೆ ಯಾತ್ರಿಗಳು ತೆರಳುತ್ತಿದ್ದ ಬಸ್‌ ಪಲ್ಟಿಯಾಗಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಶಬರಿಮಲೆ ದರ್ಶನವನ್ನು ಮುಗಿಸಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿ ಕಮರಿಗೆ ಉರುಳಿದೆ. ಪರಿಣಾಮ ತಮಿಳುನಾಡು ಮೂಲದ 9 ಮಕ್ಕಳು ಸೇರಿದಂತೆ ಒಟ್ಟು 64 ಪ್ರಯಾಣಿಕರಲ್ಲಿ 20 ಕ್ಕೂ ಹೆಚ್ಚಿನ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!