ಉಡುಪಿ: ವಿದೇಶದ ಉದ್ಯೋಗದ ಆಸೆಗೆ ಬಿದ್ದು 6.90 ಲಕ್ಷ ಕಳೆದುಕೊಂಡ!
ಉಡುಪಿ ಮಾ.14(ಉಡುಪಿ ಟೈಮ್ಸ್ ವರದಿ): ವೀಸಾ ಮಾಡಿಕೊಂಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 6.90 ಲಕ್ಷ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಜಯರಾಜ್ ಆಚಾರ್ಯ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ವಿದೇಶದಲ್ಲಿ ಉದ್ಯೋಗಕ್ಕಾಗಿ ವಾಟ್ಸ್ ಅಪ್ ನಲ್ಲಿ ಕಂಡು ಬಂದ ವೀಸಾ ಮಾಡಿಕೊಡುವ ಪ್ರಕಟಣೆಯನ್ನು ಓದಿ ಅದರಲ್ಲಿದ್ದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಕೊಡುವ ಏಜೆಂಟ್ ಎಂದು ನಂಬಿಸಿ, ಆನ್ ಲೈನ್ ಮುಖೇನ ಇಂಟರ್ ವೀವ್ ನಡೆಸಿದ್ದನು. ಬಳಿಕ ವಿಸಾ ಮಾಡಿಸಲು ಚಾರ್ಜ್ ಮತ್ತು ಇನ್ನಿತರ ಖರ್ಚುಗಳ ನೆಪ ಹೇಳಿ ಜ.9 ರಿಂದ ಫೆ.8 ರವರೆಗೆ ಹಂತ ಹಂತವಾಗಿ ಒಟ್ಟು 6,90,343 ರೂ. ಹಣವನ್ನು ವಿವಿಧ ಖಾತೆಗೆ ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ವೀಸಾ ನೀಡದೇ ಪಡೆದ ಹಣವನ್ನೂ ವಾಪಾಸು ನೀಡದೇ ವಂಚಿಸಿರುವುದಾಗಿ ನೀಡಿದ ವಂಚಿಸಿರುವುದಾಗಿ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.