ತಡವಾಗಿ ಎದ್ದೇಳುವ ಪತ್ನಿಯ ವಿರುದ್ಧ ಪತಿ ಏನು ಮಾಡಿದ ಗೊತ್ತಾ…!
ಬಸವನಗುಡಿ ಮಾ.13: ಪತ್ನಿ ಮನೆಯವರಿಂದ ದೌರ್ಜನ್ಯಕ್ಕೆ ಒಳಗಾದ ಪತಿಯೋರ್ವ ತನಗೆ ಆಗಿರುವ ಅನ್ಯಾಯಕ್ಕೆ ಪತ್ನಿಯ ಮನೆಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ.
ಈ ಬಗ್ಗೆ ಕಮ್ರಾನ್ ಖಾನ್ ಎಂಬಾತ ತನ್ನ ಪತ್ನಿಯ ಮನೆಯವರ ವಿರುದ್ಧ ದೂರು ನೀಡಿದ್ದು, ಪತ್ನಿ ತಡವಾಗಿ ಎದ್ದೇಳುತ್ತಾಳೆ. ರಾತ್ರಿ ಮಲಗಿದ್ರೆ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡ್ತಾಳೆ. ಸಂಜೆ 5-30ಕ್ಕೆ ಮಲಗಿದ್ರೆ ರಾತ್ರಿ 9-30 ಕ್ಕೆ ಎದ್ದೇಳುತ್ತಾಳೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಮಾಡ್ತಿದಾಳೆ. ಮನೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಅಡುಗೆ ಕೂಡ ಮಾಡುವುದಿಲ್ಲ ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ನಾನು ಪ್ರಶ್ನಿಸದೆ ಸುಮ್ಮನಿದ್ದೆ ಆದರೆ ಈಗ ಕುಟುಂಬಸ್ಥರಿಂದ ಹಲ್ಲೆ ನಡೆಸಿದ್ದಾಳೆ. ತನಗೆ ಪತ್ನಿಯಿಂದ ಹಾಗೂ ಆಕೆಯ ಕುಟುಂಬದಿಂದ ನರಕಯಾತನೆಯಾಗಿದೆ. ಹೀಗಾಗಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.