ಜಾಲತಾಣದಲ್ಲಿ ಮೆಸೇಜ್ ಕಳುಹಿಸಿದ ವಿಚಾರ ಇಬ್ಬರ ನಡುವೆ ಜಗಳ- ದೂರು ದಾಖಲು
ಶಂಕರನಾರಾಯಣ ಫೆ.26(ಉಡುಪಿ ಟೈಮ್ಸ್ ವರದಿ): ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಶಂಕರನಾರಾಯಣ ಠಾಣೆಯಲ್ಲಿ ಪರಸ್ಪರ ದೂರು ಪ್ರತಿ ದೂರು ದಾಖಲಾಗಿದೆ.
ಈಬಗ್ಗೆ ಕುಂದಾಪುರದ ಅಂಪಾರ ಗ್ರಾಮದ ಮಹೇಂದ್ರ ಭೋವಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಮಹೇಂದ್ರ ಭೋವಿ ಅವರಿಗೂ ಸುರ್ಜಿತ ಶೆಟ್ಟಿ ಈತನಿಗೂ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹಾಕಿದ ಬಗ್ಗೆ ಮನಸ್ತಾಪವಿದ್ದು. ಇದೇ ವಿಷಯದಲ್ಲಿ ನಿನ್ನೆ ಬೆಳಿಗ್ಗೆ ಆರೋಪಿ ಸುರ್ಜಿತ್ ಶೆಟ್ಟಿ ಆತನ ಮೊಬೈಲ್ ನಂಬ್ರದಿಂದ ಪೋನ್ ಮಾಡಿ ಬೆದರಿಕೆ ಹಾಕಿದ್ದನು. ಆ ಬಳಿಕ ಅವರೊಳಗೆ ಊರಿನ ಗಣ್ಯರ ಇದೇ ವಿಚಾರವಾಗಿ ಸರ್ಜಿತ್ ಎಮ್ ಎಂಬವರೂ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಅದರಂತೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹಾಕಿದ ವಿಷಯದಲ್ಲಿಯ ನಿನ್ನೆ ಬೆಳಿಗ್ಗೆ ಆರೋಪಿಯ ಮಹೇಂದ್ರ ಭೋವಿ ಅವರಿಗೆ ಸರ್ಜಿತ್ ಎಮ್ ರವರು ಪೋನ್ ಮಾಡಿ ನೀನು ಬೇಡದ ಮೆಸೇಜ್ ಹಾಕಿ ನನ್ನ ಮನಸ್ಸಿಗೆ ನೋವು ಉಂಟು ಮಾಡಬೇಡ ಎಂದು ಹೇಳಿದ್ದರು.
ಈ ಸಮಯ ಆರೋಪಿ ಮಹೇಂದ್ರ ಭೋವಿ ಈತನು ಪೋನಿನಲ್ಲಿ ಬೈದು ಎನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದ್ದನು. ಆ ನಂತರ ಊರಿನ ಮುಖಂಡರು ಎರಡು ಜನರನ್ನು ಕರೆದು ರಾಜಿ ಮಾಡಿರುತ್ತಾರೆ,
ನಂತರ ಸರ್ಜಿತ್ ಎಮ್ ರವರು ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗುವಾಗ ಸಂಜೆ ವೇಳೆ ಅಂಪಾರು ಗ್ರಾಮದ ಕಂಚಾರು ಮದಗ ಎಂಬಲ್ಲಿ ದ್ವಿಚಕ್ರ ವಾಹನ ದಲ್ಲಿ ಹೋಗುತ್ತಿರುವಾಗ ಆರೋಪಿ ಮಹೇಂದ್ರ ಭೋವಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ಉಳಿದ ಆರೋಪಿಗಳಾದ ನವೀನ್ ಶೆಟ್ಟಿ ಪ್ರಕಾಶ ಶೆಟ್ಟಿ, ಸುಕೇಶ ಶೆಟ್ಟಿ ಇವರೊಂದಿಗೆ ನಿಂತಿದ್ದು, ಈ ಸಮಯ ಸರ್ಜಿತ್ ಎಮ್ ರವರ ದ್ವಿಚಕ್ರ ವಾಹನ ನಿಲ್ಲಿಸುವಂತೆ ಹೇಳಿ ಆರೋಪಿಗಳು ಸರ್ಜಿತ್ ಎಮ್ ರವರಿಗೆ ಅವಾಚ್ಯ ಶಬ್ದದಿಂದ ಬೈದು ಹೊಡೆದು ಹಲ್ಲೆ ಮಾಡಿ ಬೆದರಿಕೆ ಹಾಕಿರುತ್ತಾರೆ, ಆ ಬಳಿಕ ಕೂಡಾ ಸರ್ಜಿತ್ ಎಮ್ ರವರನ್ನು ಅಡ್ಡಗಟ್ಟಿ ಹೊಡೆಯಲು ಬಂದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ಪ್ರಕರಣ ದಾಖಲಾಗಿದೆ. ಮದ್ಯಸ್ಥಿಕೆಯಲ್ಲಿ ರಾಜಿ ಆಗಿತ್ತು. ಆ ನಂತರ ಮಹೇಂದ್ರ ಭೋವಿ ರವರು ಅವರ ಮೊಬೈಲ್ ಪೋನಿನ ಸ್ಟೇಟಸ್ನಲ್ಲಿ “ನನಗೆ ಬೆದರಿಕೆ ಹಾಕಿ ದಮ್ಕಿ ಹಾಕಿದರೇ ಬಗ್ಗಲ ಎಂದು ಹಾಕಿದ್ದು “ ಈ ವಿಷಯದಲ್ಲಿ ಆರೋಪಿ ಮಂಜುನಾಥ ಶೆಟ್ಟಿ ಈತನು ಮಹೇಂದ್ರ ಭೋವಿ ಅವರ ಬಗ್ಗೆ ವಿಚಾರಿಸಿದ್ದು, ಈ ಬಳಿಕ ಮಹೇಂದ್ರ ಭೋವಿರವರು ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗುತ್ತಿರುವಾಗ ಸಂಜೆ ವೇಳೆ ಅಂಪಾರು ಗ್ರಾಮದ ಕಂಚಾರು ಎಂಬಲ್ಲಿ ಅವರ ಸ್ನೇಹಿತ ಪ್ರದೀಪ್ ಎಂಬುವರೊಂದಿಗೆ ಹೋಗುತ್ತಿರುವಾಗ ಆರೋಪಿಗಳು ಸೇರಿ ಕಾರಿನಲ್ಲಿ ಬಂದು ಮಹೇಂದ್ರ ಭೋವಿರವರ ದ್ವಿಚಕ್ರ ವಾಹನಕ್ಕೆ ಕಾರನ್ನು ಅಡ್ಡ ಇಟ್ಟು, ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಆ ಬಳಿಕ ಉದಯ ಎಂಬಾತನೊಂದಿಗೆ ಸೇರಿ ಪುನ: ಅಂಪಾರು ಪೇಟೆಯಲ್ಲಿ ಮಹೇಂದ್ರ ಭೋವಿ ರವರನ್ನು ಹುಡುಕುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.