ಗುಜರಾತ್‌ ನಲ್ಲಿ ಮತ್ತೆ ಮತ್ತೆ ಕಂಪಿಸುತ್ತಿರುವ ಭೂಮಿ- ಇಂದು 4.3 ತೀವ್ರತೆಯ ಕಂಪನ!

ಅಹಮದಾಬಾದ್: ಗುಜರಾತ್‌ನಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪ ಸಂಭವಿಸಿರುವುದು ವರದಿಯಾಗಿದೆ.
ಇಂದು ಮಧ್ಯಾಹ್ನ 3:21ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರವು ಮಾಹಿತಿ ನೀಡಿದೆ.

ಭೂಕಂಪದ ಕೇಂದ್ರಬಿಂದು ಗುಜರಾತ್​ನ ರಾಜಕೋಟ್​ ನಿಂದ ವಾಯವ್ಯ ದಿಕ್ಕಿಗೆ (ನಾರ್ತ್ ವೆಸ್ಟ್) 270 ಕಿಮೀ ದೂರದ ಸ್ಥಳದಲ್ಲಿ ಇತ್ತು. ನೆಲದಿಂದ 10 ಕಿಮೀ ಆಳದಲ್ಲಿ ಗುರುತು ಮಾಡಲಾಗಿದೆ. ಭೂಕಂಪ ದಿಂದ ಯಾವುದೇ ಅನಾಹುತವಾದ ವರದಿ ಬಂದಿಲ್ಲ. 

ಕಳೆದ ವಾರ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವ ಆಗಿತ್ತು ಎಂದು ಇನ್‌ಸ್ಟಿಟ್ಯೂಟ್ ಆಫ್ ಸಿಸ್ಮಾಲಾಜಿಕಲ್ ರಿಸರ್ಚ್‌ನ (ಐಎಸ್‌ಆರ್‌) ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!