ನಾಳೆ ಉಡುಪಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ: ಕಾರ್ಯಕರ್ತರಲ್ಲಿ ಹೊಸ‌ ಹುರುಪು-ರಾಜೇಶ್ ಜಿ.ವಿ

ಉಡುಪಿ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾಜೀ ಯ ಉಡುಪಿ ಭೇಟಿ ಕಾರ್ಯಕರ್ತರಲ್ಲಿ ನವೋ ಉಲ್ಲಾಸ ಮೂಡಿಸಿದೆ ಎಂದು ರಾಜ್ಯ ಸಂಘಟನಾ ಪ್ರದಾನ ಕಾರ್ಯದರ್ಶಿ ರಾಜೇಶ್ ಜಿ ವಿ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವುದು ಖಚಿತ, ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದರು. ರಾಷ್ಟ್ರೀಯ ಅಧ್ಯಕ್ಷರ ಈ ಭೇಟಿ ಪಕ್ಷದ ಗೆಲುವಿನ ಅಂತರವನ್ನು ಹೆಚ್ಚಿಸಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಕುಯಿಲಾಡಿ ಸುರೇಶ ನಾಯಕ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ , ರಾಜ್ಯ ಉಪಾಧ್ಯಕ್ಷೆ ನಯನ ಗಣೇಶ್ , ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಮನೋಹರ್ ಕಲ್ಮಾಡಿ , ನವೀನ ಶೆಟ್ಟಿ ಕುತ್ಯಾರ್ ಹಾಗು ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು

ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಬೆಳ್ತಂಗಡಿ, ಜಿಲ್ಲಾ ವಕ್ತಾರರಾದ ರಾಘವೇಂದ್ರ ಕಿಣಿ, ಜಿಲ್ಲಾ ಉಪಾಧ್ಯಕರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ,ಶ್ರೀಶ ನಾಯಕ್ ,ಸುಪ್ರಸಾದ್ ಶೆಟ್ಟಿ , ಗೀತಂಜಲಿ ಸುವರ್ಣ, ಜಿಲ್ಲಾ ಮೋರ್ಚಾಗಳು ಅಧ್ಯಕ್ಷರಾದ ವೀಣಾ ಶೆಟ್ಟಿ, ನಿತ್ಯಾನಂದ ನಾಯ್ಕ್, ದಾವೂದ್ ಅಭುಬಕರ್, ರಾಜ್ಯ ಪದಾಧಿಕಾರಿಗಳಾದ ದಿನಕರ್ ಬಾಬು, ಶಿಲ್ಪಾ ಸುವರ್ಣ, ಜಿಲ್ಲಾ ಪದಾಧಿಕಾರಿಗಳಾದ ಶ್ರೀನಿಧಿ ಹೆಗ್ಡೆ, ಸತ್ಯಾನಂದ ನಾಯಕ್, ಸುದೀಪ್ ಶೆಟ್ಟಿ, ಮಹೇಶ್,ಸಚಿನ್ ಪೂಜಾರಿ ಉಪಸ್ಥಿತರಿದ್ದರು.

ವಾಹನ ನಿಲುಗಡೆಗೆ ಸೂಚನೆ ಪಾಲಿಸಿ….

ನಾಳೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಬೂತ್ ಸಮಿತಿಯ ಪದಾಧಿಕಾರಿಗಳ ಸಮಾವೇಶದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಸಮಾವೇಶಕ್ಕೆ ಬರುವ ವಾಹನಗಳು ಕಾರ್ಯಕರ್ತರನ್ನು ಎಂ.ಜಿ. ಎಂ ಮೈದಾನದಲ್ಲಿ ಇಳಿಸಿ ಕೆಳಗೆ ಸೂಚಿಸಿದ ಸ್ಥಳಗಳಿಗೆ ತೆರಳಬೇಕು .

ಕುಂದಾಪುರ ಮತ್ತು ಬ್ರಹ್ಮಾವರದ ಕಡೆಯಿಂದ ಬರುವ ಬಸ್ಸುಗಳು ಬೀಡಿನಗುಡ್ಡೆ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಇನ್ನು ಕಾರ್ಕಳ ಮತ್ತು ಕಾಪುವಿನಿಂದ ಬರುವ ಬಸ್ಸುಗಳು ಮಣಿಪಾಲದ ಎಂಜೆಸಿ. ಕಾಲೇಜಿನ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.

ಉಡುಪಿ ನಗರದಿಂದ ಬರುವ ಬಸ್ಸುಗಳು ಮುಖ್ಯ ರಸ್ತೆಯ ಬದಿಯಲ್ಲಿ ಪಾರ್ಕಿಂಗ್ ಮಾಡಬೇಕಾಗಿ ವಿನಂತಿ. ಹಾಗೆಯೇ ವಿಐಪಿ ವಾಹನಗಳಿಗೆ ಎಂಜಿಎಂ ಮೈದಾನದ ಹಿಂಬಾಗ ಇರುವ, ಎಸ್.ಆರ್.ಎಸ್ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪಾರ್ಕಿಂಗ್ ವ್ಯವಸ್ಥೆಯ ಉಸ್ತುವಾರಿ ದಿನಕರ್ ಪೂಜಾರಿ ಕುಂಜಿಬೆಟ್ಟು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!