ಉಡುಪಿ: ವೆಲ್ಫೇರ್ ಕೋ ಆ.ಸೊಸೈಟಿಯ ಅಧ್ಯಕ್ಷರಾಗಿ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ

ಉಡುಪಿ: ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ ಆ. ಸೊಸೈಟಿ ಇದರ 2023-27 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಮತ್ತು ಉಪಾಧ್ಯಕ್ಷರಾಗಿ ನಿಸಾರ್ ಅಹ್ಮದ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಮುಹಮ್ಮದ್ ಆರಿಫ್ ಕಾಸಿಂ ನೇಮಕಗೊಂಡರು.

ಅಧ್ಯಕ್ಷರಾದ ಅಕ್ಬರ್ ಅಲಿ ಇವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಎಮ್. ಶಬ್ಬೀರ್ ಮಲ್ಪೆ, ಅನ್ವರ್ ಅಲಿ ಕಾಪು, ಜಿ.ಎಂ. ಶರೀಫ್ ಹೂಡೆ, ಅಬ್ದುಲ್ ಅಝೀಝ್ ಉದ್ಯಾವರ, ಜಿ. ಶೋಯೆಬ್ ಅಹ್ಮದ್ ಮಲ್ಪೆ, ಇಕ್ಬಾಲ್ ಸಾಹೇಬ್ ಕಾಪು, ಹುಸೈನ್ ಕೋಡಿಬೆಂಗ್ರೆ, ಮುಹಮ್ಮದ್ ಇದ್ರೀಸ್ ಹೂಡೆ, ರಯೀಸ್ ಅಹ್ಮದ್ ಆದಿಉಡುಪಿ, ಇಸಾಕ್ ಅಬೂಬಕರ್ ಹೂಡೆ, ಸಮೀನ ಶುಕೂರ್ ಆದಿಉಡುಪಿ, ಹಸೀನಾ ಕಾಪು, ವಾಜಿದಾ ತಬಸ್ಸುಮ್ ಕೊಡವೂರ್ ಇವರು ಆಯ್ಕೆಯಾದರು.

Leave a Reply

Your email address will not be published. Required fields are marked *

error: Content is protected !!