ಮುನಿಯಾಲು ಗೋಧಾಮ ದೇಶಕ್ಕೆ ದೊಡ್ಡ ಕೊಡುಗೆ – ಡಾ.ಎಲ್.ಎಚ್.ಮಂಜುನಾಥ್‌

ಮುನಿಯಾಲು ಗೋಧಾಮಕ್ಕೆ ಬಂದಿರುವುದು ಜೀವನದ ಅಮೂಲ್ಯ ಕ್ಷಣ. ಒಬ್ಬ ಕೈಗಾರಿಕೊಧ್ಯಮಿ ಪರಿಸರ ಪ್ರೇಮಿಯಾಗಿ ದೇಶಿಯ ಗೋವುಗಳು, ಕೃಷಿಯನ್ನು ಹೇಗೆ ಬೆಳೆಸಬಹುದು ಎಂಬುದಾಗಿ ಕೃಷಿಕರಿಗೆ ಮಾದರಿಯಾಗಿ ಗೋಧಾಮವನ್ನು ಬೆಳೆಸಿರುವುದು ನಮಗೆಲ್ಲ ಪ್ರೇರಣೆಯಾಗಿದೆ, ಕೃಷಿಕರು ರೈತರು ಯೋಜನೆ ಯೋಚನೆ ಮಾಡಿಕೊಂಡು ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಯನ್ನು ಮಾಡಿದರೆ ಕೃಷಿಯೂ ಲಾಭದಾಯಕದ ಜೊತೆಗೆ ತೃಪ್ತಿದಾಯಕವಾಗಲಿದೆ ಎಂಬುದಕ್ಕೆ ಮುನಿಯಾಲು ಗೋಧಾಮ ಸಾಕ್ಷಿಯಾಗಿದೆ.

ಗೋಧಾಮ ನಮಗೆಲ್ಲ ಅಚ್ಚರಿ ಮೂಡಿಸಿ, ಗೋಲೋಕವನ್ನೇ ಸೃಷ್ಠಿಸಿ ಗೋಧಾಮ ದೇಶಕ್ಕೆ ಕೊಡುಗೆ ನೀಡಿ, ನಾವು ಗೋವಿನ ಬಳಿಗೆ ಹೋಗುತ್ತೇವೆ, ಆದರೆ ಗೋಧಾಮದಲ್ಲಿ ಸ್ವಚ್ಚಂದ್ಧವಾಗಿ ತಿರುಗಾಡುವ ಗೋವುಗಳೇ ನಮ್ಮ ಬಳಿ ಬಂದು ಪ್ರೀತಿ ತೋರಿಸುವಾಗ ಅತ್ಯಂತ ರೋಮಾಂಚನವಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಹೆಬ್ರಿ ಸಮೀಪದ ಮುನಿಯಾಲಿನಲ್ಲಿರುವ ದೇಶಿಯ ಗೋತಳಿಗಳ ಅಭಿವೃದ್ಧಿ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಗೋಧಾಮಕ್ಕೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವರ ಪೂಜೆ,ಗೋಪೂಜೆ ನೆರವೇರಿಸಿದ ಡಾ.ಎಲ್.ಎಚ್.ಮಂಜುನಾಥ್‌ ವಿಶಾಲವಾದ ಫಾರ್ಮ್‌,ಪುರಾತನ ನಾಗಬನ ,ಕೃಷಿಯನ್ನು ವೀಕ್ಷಿಸಿದರು. ದೇಶಿಯ ಗೋತಳಿಗಳ ಅಭಿವೃದ್ಧಿ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಗೋಧಾಮದ ಸಂಸ್ಥಾಪಕ ಜಿ. ರಾಮಕೃಷ್ಣ ಆಚಾರ್‌, ಕಾರ್ಯದರ್ಶಿ ಸವಿತಾ ಆರ್.ಆಚಾರ್‌, ಸುಕುಮಾರ್‌ ಮುನಿಯಾಲ್‌ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!