ಹನ್ನೆರಡು ವರ್ಷದಲ್ಲಿ 16 ಲಕ್ಷ ಮಂದಿಯಿಂದ ಭಾರತೀಯ ಪೌರತ್ವಕ್ಕೆ ಗುಡ್ ಬೈ!

ನವದೆಹಲಿ: 2011 ರಿಂದ 16 ಲಕ್ಷ ಮಂದಿ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಈ ಪೈಕಿ ಕಳೆದ ವರ್ಷ ಒಂದರಲ್ಲೇ 2,25,620 ಮಂದಿ ಪೌರತ್ವ ಬಿಟ್ಟುಕೊಟ್ಟಿದ್ದಾರೆ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಅಂಕಿ-ಅಂಶ ಪ್ರಕಟಿಸಿದೆ.
 
ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಅಂಕಿ-ಅಂಶಗಳನ್ನು ಪ್ರಕಟಿಸಿದ್ದಾರೆ. 2015 ರಲ್ಲಿ 1,31,489 ಮಂದಿ, 2016 ರಲ್ಲಿ 1,41,603 ಮಂದಿ, 2017 ರಲ್ಲಿ 1,33,049 ಮಂದಿ ಪೌರತ್ವ ತ್ಯಜಿಸಿದ್ದರೆ, 2018 ರಲ್ಲಿ ಈ ಸಂಖ್ಯೆ 1,34,561 ರಷ್ಟಿತ್ತು ಹಾಗೂ 1,44,017 ಮಂದಿ 2019 ರಲ್ಲಿ ಪೌರತ್ವ ತ್ಯಜಿಸಿದ್ದಾರೆ, 2020 ರಲ್ಲಿ 85,256 ಹಾಗೂ 2021 ರಲ್ಲಿ 1,63,370 ಮಂದಿ ಪೌರತ್ವವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಸಚಿವರು ನೀಡಿರುವ ಮಾಹಿತಿಯ ಪ್ರಕಾರ, 2022 ರಲ್ಲಿ 2.25,620 ಮಂದಿ ಪೌರತ್ವತ್ಯಜಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!