ಚೀನಾದಲ್ಲಿ ಕೋವಿಡ್ ಉಲ್ಬಣ- ಓಮಿಕ್ರಾನ್ ಬಿಎಫ್.7 ವೈರಸ್ ಭಾರತದಲ್ಲೂ ಪತ್ತೆ!

ನವದೆಹಲಿ: ಸದ್ಯ ಚೀನಾದಲ್ಲಿ ಅಬ್ಬರಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ಉಪ ತಳಿ ಬಿಎಫ್.7 ವೈರಸ್ ಭಾರತದಲ್ಲೂ ಮೂರು ಪ್ರಕರಣ ಪತ್ತೆಯಾಗಿದೆ.

ಚೀನಾದ ಪ್ರಸ್ತುತ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿರುವ ಬಿಎಫ್. 7 ನ ಮೊದಲ ಪ್ರಕರಣ ಕಳೆದ ಅಕ್ಟೋಬರ್ ನಲ್ಲಿ ಗುಜರಾತ್ ನ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ನಲ್ಲಿ ಪತ್ತೆಯಾಗಿತ್ತು ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ, ಗುಜರಾತ್‌ನಿಂದ ಎರಡು ಪ್ರಕರಣಗಳು ವರದಿಯಾಗಿದ್ದು, ಒಡಿಶಾದಿಂದ ಒಂದು ಪ್ರಕರಣ ವರದಿಯಾಗಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ತಜ್ಞರು, ಸದ್ಯಕ್ಕೆ ಕೋವಿಡ್ ಕೇಸೆಲೋಡ್‌ನಲ್ಲಿ ಒಟ್ಟಾರೆ ಯಾವುದೇ ಹೆಚ್ಚಳವಿಲ್ಲವಾದರೂ, ಅಸ್ತಿತ್ವದಲ್ಲಿರುವ ಮತ್ತು ಹೊಸ ರೂಪಾಂತರಗಳ ಜಾಡನ್ನು ಪತ್ತೆಹಚ್ಚಲು ನಿರಂತರ ಕಣ್ಗಾವಲು ಅಗತ್ಯವಿದೆ ಎಂದಿದ್ದಾರೆ. ಅಲ್ಲದೆ ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಳ ಸೇರಿದಂತೆ ಕೋವಿಡ್ ಸೋಂಕಿನ ಸ್ಥಿತಿಗತಿ ಮೇಲೆ ಕಣ್ಗಾವಲು ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!