ನನಗೆ ಪ್ರತಿದಿನ 2-3 ಕಿಲೋ ನಿಂದನೆ ಸಿಗುತ್ತದೆ: ಪ್ರಧಾನಿ ಮೋದಿ

ಹೈದರಾಬಾದ್, ನ. 12: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಭ್ರಷ್ಟಾಚಾರ ಮತ್ತು ವಂಶಪಾರಂಪರ್ಯ ರಾಜಕಾರಣದಲ್ಲಿ ತೊಡಗಿದ್ದಾರೆ ಎಂಬುದಾಗಿ ಅವರ ಹೆಸರನ್ನು ಉಲ್ಲೇಖಿಸದೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದಅವರು, ‘‘ರಾಜ್ಯಕ್ಕೆ, ಕುಟುಂಬಕ್ಕೆ ಆದ್ಯತೆ ನೀಡುವ ಅಲ್ಲ, ಜನರಿಗೆ ಆದ್ಯತೆ ನೀಡುವ ಸರಕಾರದ ಅಗತ್ಯವಿದೆ’’ ಎಂದುಹೇಳಿದರು.

ಇಷ್ಟೊಂದು ಕಠಿಣ ಪರಿಶ್ರಮ ಪಟ್ಟರೂ ನೀವು ಯಾಕೆ ದಣಿಯುವುದಿಲ್ಲ ಎಂದು ಜನರು ನನ್ನನ್ನು ಕೇಳುತ್ತಾರೆ ಎಂದು ಅವರು ನುಡಿದರು.‘‘ನನಗೆ ದಣಿವಾಗುವುದಿಲ್ಲ. ಯಾಕೆಂದರೆ, ನಾನು ಪ್ರತಿ ದಿನ 2-3 ಕೆಜಿ ‘ಗಾಲಿ’ಗಳನ್ನು (ನಿಂದನೆಗಳು) ತಿನ್ನುತ್ತೇನೆ. ದೇವರು ನನಗೆ ಹೇಗೆ ಆಶೀರ್ವಾದ ಮಾಡಿದ್ದಾರೆ ಎಂದರೆ, ನಾನು ತಿಂದ ನಿಂದನೆಗಳು ಹೊಟ್ಟೆಯಲ್ಲಿ ಪೌಷ್ಟಿಕಾಂಶವಾಗಿ ಪರಿವರ್ತನೆಯಾಗುತ್ತದೆ’’ ಎಂದರು.

‘‘ಮೋದಿಯನ್ನು ನಿಂದಿಸಿ, ಬಿಜೆಪಿಯನ್ನು ನಿಂದಿಸಿ ಪರವಾಗಿಲ್ಲ.ಆದರೆ, ನೀವು ತೆಲಂಗಾಣ ಜನತೆಯನ್ನು ನಿಂದಿಸಿದರೆ ನೀವು ಅದಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ’’ ಎಂದರು.

1 thought on “ನನಗೆ ಪ್ರತಿದಿನ 2-3 ಕಿಲೋ ನಿಂದನೆ ಸಿಗುತ್ತದೆ: ಪ್ರಧಾನಿ ಮೋದಿ

Leave a Reply

Your email address will not be published.

error: Content is protected !!