ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ- ಉಚಿತ ಕನ್ನಡಕ ವಿತರಣೆ

ಉಡುಪಿ ಅ.25(ಉಡುಪಿ ಟೈಮ್ಸ್ ವರದಿ): ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಕಳತ್ತೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಅಂಧತ್ವ ನಿವಾರಣಾ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ, ಕಳತ್ತೂರಿನ ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೊರಿಯಮ್‍ನಲ್ಲಿ, ನೇತ್ರ ಉಚಿತ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರ ನಡೆಯಿತು. 

ಶಿಬಿರಗಳನ್ನು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ  ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಣ್ಣಿನ ವಿವಿಧ ಬಗೆಯ ತೊಂದರೆಗಳು  ಹಾಗೂ ನೇತ್ರ ರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 

ಶೇಖರ ಬಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಉಡುಪಿಯ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ದಿವಾಕರ ಶೆಟ್ಟಿ, ಜಯಲಕ್ಷ್ಮಿ ಆಳ್ವ, ವಾಸು ಶೆಟ್ಟಿ, ರಾಘವೇಂದ್ರ ಭಟ್, ಮಹಮ್ಮದ್ ಫಾರೂಕ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಶಿಬಿರದಲ್ಲಿ 124 ಜನರ ನೇತ್ರ ತಪಾಸಣೆ ನಡೆಸಲಾಯಿತು, 14 ಜನರನ್ನು ಉಚಿತ ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು ಹಾಗೂ 49 ಜನರನ್ನು ಉಚಿತ ಕನ್ನಡಕ ವಿತರಣೆಗೆ ಆಯ್ಕೆ ಮಾಡಲಾಯಿತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!