ಉಡುಪಿ: ಮಲ್ಪೆಯ ಕಡಲ ಕಿನಾರೆಯಲ್ಲಿ ಇಂದು ಸಂಜೆ ಸಾವಿರಾರು ಮಂದಿ ಚಂದ್ರ ಗ್ರಹಣದ ದೃಶ್ಯವನ್ನು ವೀಕ್ಷಿಸಿ ಸಂಭ್ರಮಪಟ್ಟರು.
ಪೂರ್ಣ ಪ್ರಜ್ಞ ಅಮೆಚೂರ್ ಆಸ್ಟ್ರೊನಾಮರ್ಸ್ ಕ್ಲಬ್ ವತಿಯಿಂದ ಪೂರ್ಣಪ್ರಜ್ಞ ಕಾಲೇಜಿನ ಭೌತ ಶಾಸ್ತ್ರ ವಿಭಾಗ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಮಲ್ಪೆ ಬೀಚ್‌ನಲ್ಲಿ ಅಗತ್ಯ ವ್ಯವಸ್ಥೆ ಮಾಡಿದ್ದರು. ಸೂರ್ಯಾಸ್ತಮಾನವಾಗುತ್ತಿದ್ದಂತೆ ಸೂರ್ಯನ ಭಾಗವನ್ನು ಚಂದ್ರ ಆವರಿಸುತ್ತಿದ್ದಂತೆ ಗ್ರಹಣವು ಬರಿಗಣ್ಣಿನಿಂದ ನೋಡಬಹುದೆಂದು ಖಗೋಳಶಾಸ್ತ್ರಜ್ಞರಾದ ಎ.ಪಿ.ಭಟ್ ಹೇಳುತ್ತಿದ್ದಂತೆ ನೆರೆದಿದ್ದ ಜನ ಬಹಳ ಖುಷಿಯಿಂದ ನೋಡಿ ಸಂಭ್ರಮ ಪಟ್ಟರು.
ಗ್ರಹಣ ವೀಕ್ಷಣೆಗೆ ಮೂರು ಟೆಲಿಸ್ಕೋಪ್‌ಗಳನ್ನು ಹಾಕಲಾಗಿತ್ತು. 3 ಇಂಚು ಹಾಗೂ 8 ಇಂಚಿನ ಎರಡು ಟೆಲಿ ಸ್ಕೋಪ್‌ಗಳಲ್ಲಿ ನೂರಾರು ಸಾರ್ವಜನಿಕರು ಗ್ರಹಣದ ಸುಂದರ ದೃಶ್ಯಗಳನ್ನು ವೀಕ್ಷಿಸಿದರು. ಒಂದು ಟೆಲಿಸ್ಕೋಪ್ ಮೂಲಕ ಯೂಟ್ಯೂಬ್ ನೇರ ಪ್ರಸಾರ ನಡೆಯಿತು. ಸಾರ್ವಜನಿಕರ ವೀಕ್ಷಣೆಗೆ ಬೃಹತ್ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು.
ಇದರ ಜತೆಗೆ ಪಿನ್ ಹೋಲ್ ಪ್ರೊಜೆಕ್ಟರ್‌ಗಳು, ಪಿನ್‌ಹೋಲ್ ಬಾಕ್ಸ್‌ಗಳ ಮೂಲಕವೂ ಸಾರ್ವಜನಿಕರು ಗ್ರಹಣ ವೀಕ್ಷಣೆ ಮಾಡಿದರು. ಎಲ್ಲರೂ ಗ್ರಹಣವನ್ನು ಕಣ್ತುಂಬಿಕೊಳ್ಳಬೇಕು ಎಂಬ ಉದ್ದೇಶದಿಂದ 500 ಕನ್ನಡಕಗಳನ್ನು ವಿತರಿಸಲಾಗಿತ್ತು.
ಸಂಜೆ 5.08ಕ್ಕೆ ಆರಂಭವಾದ ಸೂರ್ಯ ಗ್ರಹಣ, 5.50ರ ಹೊತ್ತಿಗೆ ಉಚ್ಛ್ರಾಯ ಸ್ಥಿತಿ ತಲುಪಿ 6.06ಕ್ಕೆ ಅಂತ್ಯವಾಯಿತು. ಚಂದ್ರನ ಶೇ 10 ಭಾಗ ಸೂರ್ಯನನ್ನು ಆವರಿಸಿದ್ದು ಸ್ಪಷ್ವವಾಗಿ ಗೋಚರಿಸುತ್ತಿತ್ತು.