ಬೀದಿ ಬದಿ ವ್ಯಾಪಾರಸ್ಥರಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತರಾಮನ್

ಚೆನ್ನೈ, ಅ9: ಜನಸಾಮಾನ್ಯರು ಹೋಗುವ ಬೀದಿ ಬದಿ ಮಾರುಕಟ್ಟೆಗಳಿಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಹೋಗುವುದೇ ಅಪರೂಪ. ಹೀಗಿರುವಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವೇ ಖುದ್ದಾಗಿ ಬೀದಿ ಬದಿ ವ್ಯಾಪಾರಸ್ಥರ ಬಳಿ ಹೋಗಿ ತರಕಾರಿ ಖರೀದಿಸಿ ಮನೆಗೊಯ್ದಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ತರಕಾರಿ ಮಾರ್ಕೆಟ್‌ನಲ್ಲಿ ತರಕಾರಿ ಖರೀದಿಸುತ್ತಿರುವ ವೀಡಿಯೋವು ಅವರ ಕಚೇರಿಯ ಟ್ವಿಟರ್‍ ಖಾತೆಯಲ್ಲಿ ಅಪ್ಲೋಡ್ ಆಗಿದೆ. ತಮಿಳುನಾಡಿನ ಚೆನ್ನೈ ಮೈಲಾಪುರ ಪ್ರದೇಶದಲ್ಲಿ ಬೀದಿ ವ್ಯಾಪಾರಿಗಳಿಂದ ಅವರು ತರಕಾರಿ ಖರೀದಿಸುತ್ತಿರುವ ವೀಡಿಯೋ ಇದಾಗಿದೆ.

ಸಿಹಿ ಗೆಣಸು, ಹಾಗಲಕಾಯಿ ಮುಂತಾದವುಗಳನ್ನು ಅವರು ಖರೀದಿ ಮಾಡಿದ್ದಾರೆ. ಅಲ್ಲದೆ ಕೆಲವು ವ್ಯಾಪಾರಿಗಳೊಂದಿಗೆ ಅವರು ಮಾತುಕತೆಯನ್ನೂ ನಡೆಸಿದ್ದಾರೆ. ವ್ಯಾಪಾರಿಗಳ ಕಷ್ಟವನ್ನೂ ಆಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!