ಕಡೆಕಾರು: ಕಾನೂನು ಅರಿವು ಕಾರ್ಯಕ್ರಮ

ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಹಾಗೂ ಕಡೆಕಾರು ನಾಗರಿಕರ ಜಂಟಿ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಶುಕ್ರವಾರ ಕಡೆಕಾರು ಬಿಲ್ಲವ ಸೇವಾ ಸಭಾಂಗಣದಲ್ಲಿ ಗಿರಿಜಾ ಗ್ರೂಫ್ ಆಫ್ ಕನ್ಸರ್ನ್ಸ್ ನ ಮಾಲಕರಾದ ರವೀಂದ್ರ ಕೆ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಉಡುಪಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ನ ಶಿಬಿರದಲ್ಲಿ ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಸೈಬರ್ ಕಾಯಿದೆ, ಪೋಕ್ಸೋ ಕಾಯಿದೆ ಬಗ್ಗೆ ಉದ್ಘಾಟಕರಾಗಿ ಬಂದಿದ್ದ ಶರ್ಮಿಳಾ ಎಸ್. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿಗಳಾದ ಗಿರೀಶ್ ಎಸ್ ಪಿ ಯವರು ಮಾಹಿತಿ ನೀಡಿ ಸಂವಾದ ನಡೆಸಿದರು.

ಅತಿಥಿಗಳಾಗಿ ಸಫಲ್ಯ ಟ್ರಸ್ಟ್ ನ ನಿರುಪಮಾ ಪ್ರಸಾದ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ವಿನೊದಿನಿ, ಮಾಜಿ ಸದಸ್ಯ ವನಜಾ ಜಯಕರ್.‌ ಶಿಬಿರಧಿಕಾರಿ ಪರಮೇಶ್ವರ್ ಎಂ ಮೊಗವೀರ ಮತ್ತು ಉಪನ್ಯಾಸಕರು ಉಪಸಿತರಿದ್ದರು.

Leave a Reply

Your email address will not be published. Required fields are marked *

error: Content is protected !!