ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ- ಗಾನ ನಾಟ್ಯಪ್ರಿಯಳ ಸನ್ನಿಧಾನದಲ್ಲಿ ದಾಖಲೆಯ ನೃತ್ಯ ಸೇವೆ

ಉಡುಪಿ: ದೊಡ್ಡಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ದಾಖಲೆಯ ರೀತಿಯಲ್ಲಿ ನೃತ್ಯ ಸೇವೆ ಸಂಪನ್ನಗೊಂಡಿತು.

ಕ್ಷೇತ್ರದ ಗತಕಾಲದ ಇತಿಹಾಸ ತಿಳಿಸುವಂತೆ ನಾಟ್ಯಾ ರಾಣಿ ಗಂಧರ್ವ ಕನ್ಯೆ ನಿತ್ಯ ನಿರಂತರ ಸೇವೆಯಿಂದ
ತಾಯಿಯನ್ನು ಸಂಪ್ರೀತಿಗೊಳಿಸಿದಂತಹ ಪುಣ್ಯ ತಾಣದಲ್ಲಿ  ಶಕ್ತಿ ಕ್ಷೇತ್ರ ಪುನರುತ್ಥಾನಗೊಂಡಾಗ ನಾಟ್ಯರಾಣಿ ಗಂಧರ್ವಕನ್ಯ ಸಂತೃಪ್ತಿಗಾಗಿ ದುರ್ಗಾ ಆದಿಶಕ್ತಿ ದೇವಿಯ ವಿಶೇಷ ಅನುಗ್ರಹಕ್ಕಾಗಿ ಕಲಾವಿದರುಗಳು ಗಾನ ನಾಟ್ಯ ಸೇವೆಯನ್ನು ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ನೀಡಿ ಕಲಾ ಬಾಳ್ವೆಯಲ್ಲಿ ಯಶಸ್ಸನ್ನ ಸಾಧಿಸುತ್ತಿದ್ದಾರೆ.

ಶರನ್ನ ನವರಾತ್ರಿಯ ಪರ್ವಕಾಲದಲ್ಲಿ ಸ್ಥಳೀಯ ಕಲಾವಿದರ ಜೊತೆ ಪರವೂರಿನ ಕಲಾವಿದರು ಕೂಡ  ತಮ್ಮ ತಂಡ ಸಹಿತವಾಗಿ ಆಗಮಿಸಿ ಕ್ಷೇತ್ರದಲ್ಲಿ ನಿರಂತರವಾದ ನೃತ್ಯ ಸೇವೆಯನ್ನು ನೀಡಿ ದಾಖಲೆಯನ್ನು ಬರೆದರು.

ಸರಿ ಸುಮಾರು 148 ಕ್ಕೂ ಅಧಿಕ ಕಲಾವಿದರು ಬೆಳಿಗ್ಗೆಯಿಂದ ರಾತ್ರಿಯ ತನಕ ಸೇವೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಸರಾಂತ ಪತ್ರಕರ್ತ ರಮೇಶ್ ಸರ್ವೆ ಅವರಿಂದ ರಚಿಸಲ್ಪಟ್ಟ ಕ್ಷೇತ್ರದ ಸಮಗ್ರ ಚಿತ್ರಣವನ್ನು ಒಳಗೊಂಡ ಕೈಪಿಡಿಯನ್ನು ದುರ್ಗಾ ನೃತ್ಯಲಯದ ವಿದುಷಿ ರೇಖಾ ದಿನೇಶ್ ಹಾಗೂ ನರ್ತಕಿ ರಿಜಿಸ್ಟರ್ ವಿದುಷಿ ಶಾಂಭವಿ ಆಚಾರ್ಯ ತಮ್ಮ ಅಪಾರ ಶಿಷ್ಯ ಸಮೂಹದೊಂದಿಗೆ ಕ್ಷೇತ್ರದ ಧರ್ಮದರ್ಶಿ ಕ್ಷೇತ್ರ ನಿರ್ಮಾತೃ ಶ್ರೀರಮಾನಂದ ಗುರೂಜಿ ದಿವ್ಯ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳಿಸಿದರು.

ಆಗಮಿಸಿದ ಎಲ್ಲಾ ಕಲಾವಿದರನ್ನು ರಮಾನಂದ ಗುರೂಜಿ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ಕಲಾವಿದರನ್ನು ವಿಶೇಷವಾಗಿ ಅನುಗ್ರಹಿಸುವ ನಿಟ್ಟಿನಲ್ಲಿ ಕಲಾವಿದರಿಂದ ಈ ಕ್ಷೇತ್ರದಲ್ಲಿ ಸೇವೆ ನಿರಂತರವಾಗಿದೆಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!