ತ್ಯಾಜ್ಯ ಘಟಕಕ್ಕೆ ವಿರೋಧ- ಚಾಂತಾರು ಪಂಚಾಯತ್’ಗೆ ಮುತ್ತಿಗೆ

ಬ್ರಹ್ಮಾವರ: ತಾಲೂಕು ವ್ಯಾಪ್ತಿಯ ಚಾಂತಾರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತ್ಯಾಜ್ಯ ಘಟಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಗ್ರಾಮಸ್ಥರು ಇವತ್ತು ಪಂಚಾಯತ್ ಗೆ ಮುತ್ತಿಗೆ ಹಾಕಿದರು. ಗ್ರಾಮದ ಸುಮಾರು 11 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಪಂಚಾಯತ್ ಮುಂದಾಗಿದೆ. ಈ ಹಿಂದೆಯೂ ಪ್ರತಿಭಟಿಸಿದ್ದ ಗ್ರಾಮಸ್ಥರು ಇವತ್ತು ಸಾವಿರ ಸಂಖ್ಯೆಯಲ್ಲಿ ಬಂದು ಪಂಚಾಯತ್ ಗೆ ಮುತ್ತಿಗೆ ಹಾಕಿ ಒಕ್ಕೊರಲಿನ ಪ್ರತಿಭಟನೆ ನಡೆಸಿದರು.

ಸುಮಾರು 11 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಘಟಕ ಸ್ಥಾಪಿಸಲು ಪಂಚಾಯತ್ ಮುಂದಾಗಿದೆ.ಈ ಪರಿಸರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, 200 ಮೀಟರ್ ಅಂತರದಲ್ಲಿ ಮಡಿನಾರು ಹೊಳೆ ಇದ್ದು ಸಾಕಷ್ಟು ವಾಸದ ಮನೆಗಳಿವೆ.ಇಲ್ಲಿ ಘಟಕ ಸ್ಥಾಪನೆ ಮಾಡಿದರೆ ಜನರಿಗೆ ಮತ್ತು‌ ಪರಸರಕ್ಕೆ ಸಾಕಷ್ಟು ತೊಂದರೆಯಾಗುತ್ತದೆ. ಪರಿಸರ ಹದಗೆಡುವುದರ ಜೊತೆಗೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ‌ ಬೀರುತ್ತದೆ ಎಂಬುದು ಗ್ರಾಮಸ್ಥರ ಆಕ್ಷೇಪವಾಗಿದೆ.

ಇವತ್ತು ಮುತ್ತಿಗೆ ನಡೆಸಿದ ಗ್ರಾಮಸ್ಥರು ವಿಶೇಷ ಸಭೆ ಕರೆದು ತ್ಯಾಜ್ಯ ಘಟಕ ನಿರ್ಮಾಣ ಪ್ರಸ್ತಾಪ ಕೈ ಬಿಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ಸ್ಥಳೀಯ ಸಾಮಾಜಿಕ ಹೋರಾಟಗಾರ ಜ್ಞಾನ ವಸಂತ ಶೆಟ್ಟಿ, ಪಂಚಾಯತ್ 11 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಯಾವ ಕಾರಣಕ್ಜೆ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಈ ಹಿಂದೆಯೂ ಪಂಚಾಯತ್ ವ್ಯಾಪ್ತಿಯ ಮತ್ತು ಸುತ್ತಮುತ್ತ ಪರಿಸರದ ಜನರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದೇವೆ.ಇವತ್ತು ಸಾವಿರ ಸಂಖ್ಯೆಯಲ್ಲಿ ಬಂದು ಮುತ್ತಿಗೆ ಹಾಕಿ‌ ಪ್ರತಿಭಟನೆ ದಾಖಲಿಸಿದ್ದೇವೆ. ಪಂಚಾಯತ್ ಅಧ್ಯಕ್ಷರು ,ಪಿಡಿಓ ಗೆ ಮನವರಿಕೆ ಮಾಡಿದ್ದೇವೆ.

ಜಿಲ್ಲಾಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ, ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ, ತಾಲೂಕು ಪಂಚಾಯತ್ ಬ್ರಹ್ಮಾವರ ಇವರಿಗೆ ಮನವಿ ಸಲ್ಲಿಸಿದ್ದೇವೆ. ಇದಕ್ಕೂ ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ಐದು ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತೇವೆ.ಈ ತ್ಯಾಜ್ಯ ಘಟಕದ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಜ್ಞಾನ ವಸಂತ ಶೆಟ್ಟಿ, ತ್ಯಾಜ್ಯ ಹೋರಾಟ ಸಮಿತಿಯ ಸಂಚಾಲಕ ಸತೀಶ್ ಪೂಜಾರಿ, ಉಪ ಸಂಚಾಲಕ ಥೋಮಸ್ ಆಡಿಸ್ನ್ ವಾಜ್, ಕೋಶಾಧಿಕಾರಿ ಪ್ರಭಾಕರ್ ಥಿಮ್ಸನ್, ಸಂತೋಷ್ ಜತನ್, ಎನ್ಸಿಲ್ ಡಿಸೋಜಾ, ಅಶೋಕ್ ಪೂಜಾರಿ, ಸಂತೋಷ್ ಜತನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!